ವಡಸಲಮ್ಮ, ಕೊಳಗದಮ್ಮಗೆ ವಿಶೇಷ ಪೂಜೆ

4

Get real time updates directly on you device, subscribe now.


ಕೊರಟಗೆರೆ: ನೂರಾರು ವರ್ಷಗಳ ಇತಿಹಾಸವುಳ್ಳ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡಸಲಮ್ಮ ಮತ್ತು ಕೊಳಗದಮ್ಮ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಜರುಗಿದವು.
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಅಳಾಲಸಂದ್ರ (ಕರೆಕಲ್ಲು) ಗ್ರಾಮದ ವಡಸಲಮ್ಮ ಮತ್ತು ಕೊಳಗದಮ್ಮ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ, ಈ ದೇವಾಲಯ ಐದು ಗ್ರಾಮಗಳಿಗೆ ಒಳಪಟ್ಟಿದ್ದು ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನಡೆದವು.

ದೇವಾಲಯದ ಟ್ರಸ್ಟ್ ಅಧ್ಯಕ್ಷ ಎ.ಆರ್ ಮಂಜುನಾಥ್ ಮಾತನಾಡಿ, ಶಕ್ತಿದೇವತೆ ವಡಸಲಮ್ಮ ಮತ್ತು ಕೊಳಗದಮ್ಮ ಐದು ಗ್ರಾಮಗಳ ಮೂಲ ದೇವತೆ, ರೈತರ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ತಾಯಿಯು ಈ ಸ್ಥಳದಲ್ಲಿ ನೆಲೆಯೂರಿದ್ದಾಳೆ, ಹಣಕಾಸಿನ ಸಮಸ್ಯೆ ಉಂಟಾಗಿ ದೇವಾಲಯದ ಕಟ್ಟಡದ ಕೆಲಸವು ಸ್ಥಗಿತಗೊಂಡಿದೆ, ಭಕ್ತ ಸಮೂಹ ದೇವಾಲಯ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಕೇಳಿಕೊಂಡರು.
ಕಾರ್ಯದರ್ಶಿ ಹೆಚ್.ವಿ ನಾಗರಾಜು ಮಾತನಾಡಿ, ವಡಸಲಮ್ಮ ಮತ್ತು ಕೊಳಗದಮ್ಮ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ, ಈ ದೇವಾಲಯಕ್ಕೆ ಅಳಾಲಸಂದ್ರ, ಕರೆಕಲ್ಲು, ಎ.ವೆಂಕಟಾಪುರ, ಹನುಮಂತಪುರ, ಸಂಕೇನಹಳ್ಳಿ ಸೇರಿದಂತೆ ಇತರೆ ಗ್ರಾಮಸ್ಥರಿಂದ ಪೂಜಿಸಲಾಗುತ್ತದೆ, ದೇವಾಲಯ ಕಟ್ಟಡ ಕಿರಿದಾಗಿದ್ದ ಕಾರಣ ನೂತನ ದೇವಾಲಯ ಕಟ್ಟಡದ ಕಟ್ಟಡವು ಬರದಿಂದ ಸಾಗುತ್ತಿದೆ ಎಂದು ಹೇಳಿದರು.

ಈ ದೇವಾಲಯ ಕೇವಲ ನಾಲ್ಕೈದು ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ, ರಾಜ್ಯ ಹೊರ ರಾಜ್ಯಗಳಿಂದಲೂ ಈ ದೇವಾಲಯಕ್ಕೆ ಬರುತ್ತಾರೆ, ಕಟ್ಟಡದ ಕೆಲಸಕ್ಕೆ ಭಕ್ತರ ಸಹಕಾರ ಅತಿಮುಖ್ಯವಾಗಿದೆ, ದೇವಾಲಯದ ಜೀಣೋದ್ಧಾರಕ್ಕೆ ಪ್ರತಿಯೊಬ್ಬ ಭಕ್ತರು ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರಾದ ಶಿವಣ್ಣ, ನಾಗರಾಜು, ನಾಗಣ್ಣ, ತಿಮ್ಮೇಗೌಡ, ಮಾಜಿ ತಾಪಂ ಸದಸ್ಯ ಶ್ರೀನಿವಾಸ್ , ನಿವೃತ್ತ ಶಿಕ್ಷಕ ಶಿವಣ್ಣ, ಮಂಜುನಾಥ್ (ವೆಂಕಟಾಪುರ), ಬೈರಪ್ಪ, ದೊಡ್ಡಣ್ಣ, ಗ್ರಾಪಂ ಸದಸ್ಯ ಸುರೇಶ್, ಶಿವಲಿಂಗಯ್ಯ, ಕೃಷ್ಣಮೂರ್ತಿ, ಗೋಪಾಲ್ ಶೆಟ್ಟಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!