ಬೋರನಕಣಿವೆ ಜಲಾಶಯದ ಬಳಿ ಚಿರತೆ ಕಾಟ

ಭಯ ಭೀತರಾದ ಜನತೆ- ಜಮೀನುಗಳಿಗೆ ತೆರಳಲು ರೈತರ ಆತಂಕ

1

Get real time updates directly on you device, subscribe now.


ಹುಳಿಯಾರು: ಹುಳಿಯಾರು ಸಮೀಪದ ಬೋರನಕಣಿವೆ ಸುತ್ತಮುತ್ತ ಚಿರತೆಯೊಂದು ಓಡಾಡುತ್ತಿದ್ದು ಆಗಾಗ ಕುರಿ, ನಾಯಿ, ದನಗಳ ಮೇಲೆ ದಾಳಿ ನಡೆಸುತ್ತಿರುವುದು ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಚಿರತೆ ಸೆರೆ ಹಿಡಿಯುಲು ಅರಣ್ಯ ಇಲಾಖೆ ಮುಂದಾಗುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹುಳಿಯಾರು ಹೋಬಳಿ ವ್ಯಾಪ್ತಿಯ ದಸೂಡಿ, ಗಾಣಧಾಳು, ಹೊಯ್ಸಳಕಟ್ಟೆ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳಲ್ಲಿ ಕಳೆದ ಎರಡ್ಮೂರು ವಾರಗಳಿಂದ ಚಿರತೆ ಕಾಟ ಹೆಚ್ಚಿದೆ, ಕುರಿರೊಪ್ಪ ಹಾಗೂ ಮನೆ ಹಿಂದೆ, ಮುಂದೆ ಕಟ್ಟಿ ಹಾಕಿರುವ ದನಕರುಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಬೆಂಚಿಹಟ್ಟಿ ಸಮೀಪದ ಕುರಿರೊಪ್ಪಕ್ಕೆ ನುಗ್ಗಿದ ಚಿರತೆ ಕುರಿ ಹಿಡಿಯಲು ಮುಂದಾದಾಗ ಕುರಿಗಳನ್ನು ಕೂಡಲು ಮಾಡಿದ್ದ ಬಲೆಯ ಗೂಡಿಗೆ ಬಿದ್ದಿದೆ, ಬಲೆಯ ಗೂಡಿನ ಬಾಗಿಲು ಭದ್ರಪಡಿಸಲು ಹೋದ ಕುರಿಗಾಹಿಯೊಬ್ಬರ ಮುಖ ಹಾಗೂ ಕೈಗಳಿಗೆ ಪರಚಿ ಗಾಯಗೊಳಿಸಿ ಪರಾರಿಯಾದ ಘಟನೆ ಸಹ ನಡೆದಿದೆ, ರಂಗನಕೆರೆ ಗ್ರಾಮದಲ್ಲಿ ಮನೆ ಮುಂದೆ ಕಟ್ಟಿದ್ದ ನಾಯಿ ಹೊತ್ತೊಯ್ದಿತ್ತು, ಅಲ್ಲದೆ ಕುರಿಹಟ್ಟಿ ಅರಣ್ಯ ಪ್ರದೇಶದಲ್ಲಿ ಕುರಿಯನ್ನು ಹೊತ್ತೊಯ್ದು ತಿಂದು ಹಾಕಿತ್ತು, ಅಲ್ಲಲ್ಲಿ ಜಮೀನು ತೋಟಗಳಲ್ಲಿ ಓಡಾಡಿದ ಹೆಜ್ಜೆ ಗುರುತು ಸಹ ಪತ್ತೆಯಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಚಿರತೆ ಪ್ರತ್ಯಕ್ಷ ವಾಗುತ್ತಿರುವುದು ಹಾಗೂ ಮೇಯಲು ಹೋದ ಕುರಿಗಳ ಮೇಲೆ ದಾಳಿ ಮಾಡುತ್ತಿರುವ ಕಾರಣ ಈ ಭಾಗದ ಜನರು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ, ಯಾವ ಸಮಯದಲ್ಲಿ ಚಿರತೆ ಎಲ್ಲಿ ದಾಳಿ ಮಾಡುತ್ತದೋ ಎಂಬ ಭಯವೂ ಜನರನ್ನು ಕಾಡುತ್ತಿದೆ, ಹಾಗಾಗಿ ಅರಣ್ಯ ಇಲಾಖೆಯವರು ತಕ್ಷಣ ಬೋನ್ ಇಟ್ಟು ಚಿರತೆ ಹಿಡಿದು ಜನರು ನೆಮ್ಮದಿಯಿಂದ ಇರುವಂತೆ ಮಾಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!