ಕನಕದಾಸರ ಜೀವನ ಮೌಲ್ಯ ಪಾಲಿಸಿ

ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಡೀಸಿ ಸಲಹೆ

3

Get real time updates directly on you device, subscribe now.


ತುಮಕೂರು: ಕನಕದಾಸರು ತಮ್ಮ ಕೀರ್ತನೆ ಮತ್ತು ವಚನಗಳ ಮೂಲಕ ವೈಚಾರಿಕತೆಗೆ ಹೊಸ ಅರ್ಥ ತಂದು ಕೊಟ್ಟ ಶ್ರೇಷ್ಠ ದಾಸಸಂತರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಳಿದಾಸ ವಿದ್ಯಾವರ್ಧಕ ಸಂಘ ಮತ್ತು ಜಿಲ್ಲೆಯ ಕುರುಬರ ಸಂಘ ಸಂಸ್ಥೆಗಳ ವತಿಯಿಂದ ಸೋಮವಾರ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಸಂತಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಬಾಲ್ಯದಲ್ಲಿ ಅಪಾರ ದೈವಭಕ್ತಿ ಹೊಂದಿದ್ದರು, ದೇವರಿಲ್ಲದ ಸ್ಥಳವೇ ಇಲ್ಲಾ ದೇವರು ನಮ್ಮ ಸರಿ-ತಪ್ಪುಗಳನ್ನು ಗಮನಿಸುತ್ತಿರುತ್ತಾನೆ, ಸರಿದಾರಿಯಲ್ಲಿ ನಡೆದಾಗ ಮಾತ್ರ ದೇವರಿಗೆ ನಾವು ಪ್ರಿಯವಾಗುತ್ತೇವೆ ಎಂದು ನಂಬಿದ್ದರು, ಕನಕದಾಸರ ನಂಬಿಕೆಯಂತೆ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ನಮ್ಮ ಸುತ್ತಮುತ್ತಲಿನ ಜನ ಗಮನಿಸುತ್ತಿರುತ್ತಾರೆ ಎಂಬ ಎಚ್ಚರಿಕೆ ಇರಬೇಕು, ಯಾವುದೇ ಕೆಲಸವಾಗಲಿ ಶ್ರದ್ಧೆ- ಭಕ್ತಿಯಿಂದ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರಲ್ಲದೆ ಕನಕದಾಸರ ಜೀವನ ಮೌಲ್ಯಗಳನ್ನು ನಾವೆಲ್ಲರೂ ಸ್ಮರಿಸಿ ಪಾಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಕನಕದಾಸರು ಕವಿಯಾಗಿ, ಸಂತನಾಗಿ, ಸಮಾಜ ಸುಧಾರಕರಾಗಿ ಸಾರ್ವತ್ರಿಕ ಮೌಲ್ಯ ತಿಳಿಸಿದರು, ಕನಕ ದಾಸರ ಸಾರ್ವಕಾಲಿಕ ಸತ್ಯಗಳನ್ನು ನಾವೆಲ್ಲರೂ ತಿಳಿದು ಬದುಕಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಪ್ರಭು.ಜಿ. ಮಾತನಾಡಿ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು- ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ಶ್ರೇಷ್ಠ ಸಂತ ಕನಕ ದಾಸರ ಸಾಹಿತ್ಯದ ವಿಚಾರಧಾರೆಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು, ಜನಸಾಮಾನ್ಯರೊಂದಿಗೆ ಬದುಕಿ ಜನರಿಗೆ ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ ಕನಕ ದಾಸರ ಕೀರ್ತನೆಗಳು ಈಗಲೂ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ತುಮಕೂರು ತಾಲ್ಲೂಕು ಡಿ.ಎಂ.ಪಾಳ್ಯ ಗುರು ರೇವಣಸಿದ್ದೇಶ್ವರ ಮಠದ ಪೀಠಾಧಿಪತಿ ಬಿಂಧುಶೇಖರ ಒಡೆಯರ್ ಮಹಾ ಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು, ಪಾಲಿಕೆ ಆಯುಕ್ತರಾದ ಅಶ್ವಿಜ.ಬಿ.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಭೀಮರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!