ಮಧುಗಿರಿ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನಿಂದ ಚಾಲನೆ ನೀಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳು ಪೂರ್ಣಕುಂಭಗಳೊಂದಿಗೆ ಬರಮಾಡಿಕೊಂಡರು.
ಉಪ ವಿಭಾಗಾಧಿಕಾರಿ ಗೊಟೂರು ಶಿವಪ್ಪ ಮಾತನಾಡಿ, ತಾಲೂಕಿನ ಗಡಿಭಾಗವಾದ ಮಿಡಿಗೇಶಿ ಹೋಬಳಿಯ ಚಂದ್ರಬಾವಿಯಿಂದ ಪಟ್ಟಣಕ್ಕೆ ಆಗಮಿಸಿದೆ, ತಾಲೂಕಿನ ಅಧಿಕಾರಿ ವರ್ಗದವರು ಹಾಗೂ ಕಸಾಪ ದ ಪದಾಧಿಕಾರಿಗಳೊಂದಿಗೆ ಬರ ಮಾಡಿಕೊಳ್ಳಲಾಗಿದೆ.
ರಥಯಾತ್ರೆಯು ಪಾವಗಡ ವೃತ್ತದ ಬಳಿಯಿರುವ ಬಾಬ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಉದ್ಯಾನವನದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ, ಮಂಡ್ಯದಲ್ಲಿ ಡಿ.20 ರಿಂದ ಡಿ. 23 ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ರಥಯಾತ್ರೆ ಎಳೆಯಲು ಮುಂದಾಗಿರುವ ಕನ್ನಡಾಭಿಮಾನಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಪುರಸಭೆಯ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ ನಾಡು ನುಡಿಯ ಪರಂಪರೆ ಕುರಿತು ಹಾಗೂ ಕನ್ನಡ ತಾಯಿ ಭುವನೇಶ್ವರಿ ಸೇರಿದಂತೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ಸರ್.ಎಂ.ವೀಶ್ವೇಶ್ವರಯ್ಯ, ಜ್ಞಾನ ಪೀಠ ಪ್ರಶಸ್ತಿ ಗಳಿಸಿರುವ ಹಿರಿಯ ಕವಿಗಳು, ಜೋಡೆತ್ತುಗಳ ಜೊತೆಯಲ್ಲಿ ರೈತ ಭೂಮಿ ಉಳುತ್ತಿರುವ ಕಲಾಕೃತಿ ಹೊಂದಿರುವ ಸುಂದರ ರಥ ಯಾತ್ರೆಯು ನೋಡುಗರ ಕಣ್ಮನ ಸೆಳೆಯುತ್ತಿದೆ.
ಎಲ್ಲಾ ಕನ್ನಡಾಭಿಮಾನಿಗಳ ಸಹಕಾರದಿಂದ ರಥ ಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ದೇವಾಲಯದಿಂದ ಮುಂದಿನ ತಾಲೂಕಿಗೆ ಕಳುಹಿಸಿ ಕೊಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ತಹಸೀಲ್ದಾರ್ ಶೀರಿನ್ ತಾಜ್, ಸಿಡಿಪಿಓ ಕಮಲ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪುರಸಭಾ ಮಖ್ಯಾಧಿಕಾರಿ ಸುರೇಶ್, ಸದಸ್ಯರಾದ ಮಂಜುನಾಥ್ ಆಚಾರ್, ನಟರಾಜು, ಉಪನ್ಯಾಸಕ ಮಹಾಲಿಂಗೇಶ್, ಶಿಕ್ಷಕ ರಂಗಾಧಾಮಯ್ಯ, ಬಿಜವರ ನಾಗರಾಜು, ಕವಯತ್ರಿ ವೀಣಾ ಶ್ರೀನಿವಾಸ್, ಮುಖಂಡರಾದ ಷಾಜು ಹಾಗೂ ಅಂಗನವಾಡಿ ಕಾರ್ಯಕರ್ತೆಯರು , ಕನ್ನಡಾಭಿಮಾನಿಗಳು ಹಾಜರಿದ್ದರು.
Comments are closed.