2 ಗ್ಯಾರಂಟಿಗೆ ಹೆಚ್ಚು ಹಣ ವ್ಯಯ: ರಂಗನಾಥ್

0

Get real time updates directly on you device, subscribe now.


ಕುಣಿಗಲ್: ತಾಲೂಕಿನಲ್ಲಿ ಮಾಸಿಕ ಒಟ್ಟಾರೆ 28.84 ಕೋಟಿ ರೂ. ಗಳನ್ನು ಸರ್ಕಾರ ಎರಡು ಪ್ರಮುಖ ಗ್ಯಾರಂಟಿಗಳ ಫಲಾನುಭವಿಗಳಿಗೆ ನೀಡುತ್ತಿದೆ ಎಂದು ಶಾಸಕ ಡಾ.ರಂಗನಾಥ ಹೇಳಿದರು.
ಬುಧವಾರ ತಾಪಂ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಕೆಡಿಪಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜುಲೈ ಮಾಹೆಯಲ್ಲಿ ತಾಲೂಕಿನಲ್ಲಿ 25 ಕೋಟಿ ರೂ. ಗೃಹಲಕ್ಷ್ಮೀ ಫಲಾನುಭವಿಗಳಿಗೆ, 3.84ಕೋಟಿ ಅನ್ನಭಾಗ್ಯಯೋಜನೆಯ ಫಲಾನುಭವಿಗಳ ಖಾತೆಗೆ ನೇರ ನಗದು ಪಾವತಿ ಮಾಡಲಾಗಿದೆ, ತಾಲೂಕಿನಲ್ಲಿ ಯಾವುದೇ ಪಡಿತರ ಕಾರ್ಡ್ ರದ್ದು ಮಾಡಲು ಬಿಡುವುದಿಲ್ಲ, ಒಟ್ಟಾರೆ 64,694 ಕುಟುಂಬಗಳು ಪಡಿತರ ಕಾರ್ಡ್ಹೊಂದಿದ್ದು ಈ ಪೈಕಿ 53,418 ಬಿಪಿಎಲ್, 3300 ಅಂತ್ಯೋದಯ ಕಾರ್ಡ, 7928 ಎಪಿಎಲ್ ಕಾರ್ಡ್ದಾರರಿದ್ದಾರೆ, ಪರಿಷ್ಕರಣೆ ಕಾರ್ಯದಲ್ಲಿ 1331 ಕಾರ್ಡ್ದಾರರನ್ನು ಬಿಪಿಎಲ್ನಿಂದ ಎಪಿಎಲ್ ಗೆ ವರ್ಗಾಯಿಸಲಾಗಿತ್ತು, ಗ್ರಾಮಾಂತರ ಪ್ರದೇಶಕ್ಕೆ ತಾವು ಭೇಟಿ ನೀಡಿದಾಗ ಗ್ರಾಮಾಂತರ ಪ್ರದೇಶದ ಜನರ ಮನವಿ ಮೇರೆಗೆ ಪುನಃ ಪರಿಶೀಲಿಸಿ 878 ಕಾರ್ಡ್ದಾರರಿಗೆ ಬಿಪಿಎಲ್ ಕಾರ್ಡ್ ಪಡಿತರ ನೀಡುವಂತೆ ಕ್ರಮ ಕೈಗೊಂಡಿದ್ದು ಎರಡು ತಿಂಗಳ ನಂತರ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು, 21-22 ನೇ ಸಾಲಿನಲ್ಲಿ ಆದಾಯ ತೆರಿಗೆ ಪಾವತಿಸಿರುವ 152 ಹಾಗೂ ಸರ್ಕಾರಿ ನೌಕರರ 19 ಕಾರ್ಡ್ ಸೇರಿ ಒಟ್ಟು 171 ಕಾರ್ಡ್ಗಳನ್ನು ಎಪಿಎಲ್ ಗೆ ವರ್ಗಾಯಿಸಲಾಗಿದೆ ಎಂದರು.
ಆಹಾರ ಇಲಾಖಾಧಿಕಾರಿಗಳು ಹೊಸದಾಗಿ 437 ಮಂದಿ ಪಡಿತರ ಕಾರ್ಡ್ಗೆ ಅರ್ಜಿ ಸಲ್ಲಿಸಿದ್ದಾರೆಂಬ ಮಾಹಿತಿ ನೀಡಿದರು.
ತಹಶೀಲ್ದಾರ್ ರಶ್ಮಿ, ತಾಪಂ ಇಒ ನಾರಾಯಣ, ನರೇಗ ಎಡಿ ಕಾಂತರಾಜು ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!