ತುಮಕೂರು: ಯಾವುದೇ ದೇಶದ ಬದಲಾವಣೆಯ ಹಿಂದೆ ಇರುವ ಶಕ್ತಿಯೆಂದರೆ ಅದು ಯುವ ಶಕ್ತಿ ಮಾತ್ರ, ಯುವಕ, ಯುವತಿಯರಾದವರು ತಮ್ಮ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿಯ ಕಡೆ ಚಿಂತಿಸಿ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದಾಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕ ರೇವಣಸಿದ್ದಪ್ಪ ಅವರು ಬರೆದ ಏಕೀಕರಣ ಪರಿಷತ್ತಿಗೆ ಶತಮಾನ, ಕನ್ನಡ ರಾಜ್ಯೋತ್ಸವವಕ್ಕೆ ವಜ್ರ ಮಹೋತ್ಸವ, ಕರ್ನಾಟಕಕ್ಕೆ ಸುವರ್ಣ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ದೇಶಕ್ಕೆ ಮಕ್ಕಳೇ ಆಸ್ತಿ, ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ದೇಶದ ಅಭಿವೃದ್ಧಿಗಾಗಿ ಚಿಂತನೆಗಳಲ್ಲಿ ಪಾಲ್ಗೊಳ್ಳಬೇಕು, ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಬೇಕು, ಪತ್ರಿಕಾ ಮಾಧ್ಯಮದವರ ಜೊತೆಗೆ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು, ನಾಯಕತ್ವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸುತ್ತಾ, ಕನ್ನಡ ನಾಡು ನುಡಿಯ ಅಭಿವೃದ್ಧಿಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕ ರೇವಣಸಿದ್ದಪ್ಪ ತಮ್ಮ ಕೃತಿಯ ಮಹತ್ವ ತಿಳಿಸಿದರು, ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನವೀನ್ ಕುಮಾರ್ ಇತರರು ಇದ್ದರು.
Comments are closed.