ಮದ್ಯ ಮುಕ್ತ ಗ್ರಾಮಕ್ಕೆ ಕೈಜೋಡಿಸಿದ ಗ್ರಾಮಸ್ತರು

1,278

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ದಿನನಿತ್ಯ ಮದ್ಯಸೇವಿಸಿ ಅಶಾಂತಿಯಿಂದ ಕೂಡಿದ್ದ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಊರಿನ ಮಂದಿ ಮದ್ಯವನ್ನೆ ನಿಷೇಧಿಸಿದ ಘಟನೆ ತಾಲೂಕಿನ ಬಡಕೇಗುಡ್ಲು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಂದನಕೆರೆ ಹೋಬಳಿಯ ಬಡಕೇಗುಡ್ಲು ಭೋವಿಕಾಲೋನಿ, ಬೋವಿಹಟ್ಟಿ, ಮೈಲ್ಕಬ್ಬೆ ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಮಾರುತ್ತಿದ್ದ ಅಕ್ರಮ ಮದ್ಯ ಮಾರಾಟವನ್ನು ಗ್ರಾಮಸ್ಥರು ಒಮ್ಮತದಿಂದ ನಿಷೇದಿಸಿದ್ದಾರೆ. ಊರಿನಲ್ಲಿ ದಿನನಿತ್ಯ ಪ್ರತಿದಿನ ಕೂಲಿ ಮಾಡಿ ಬರುತ್ತಿದ್ದ ಕಾರ್ಮಿಕರು ತಮಗೆ ಬಂದ 400-500 ರೂ ಕೂಲಿ ಹಣದಲ್ಲಿ ಸಂಪೂರ್ಣ ಮದ್ಯ ಸೇವಿಸುತ್ತಿದ್ದರು, ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದರು, ಊರಿನಲ್ಲಿ ಸಣ್ಣ ವಯಸ್ಸಿನ ಮಕ್ಕಳು ಸಹ ಮದ್ಯ ಸೇವಿಸಲು ಶುರು ಮಾಡಿದ್ದರು. ದಿನನಿತ್ಯ ಸುಮಾರು 40-45 ಸಾವಿರ ಅಕ್ರಮ ಮದ್ಯ ಮಾರಾಟವಾಗುತ್ತಿತ್ತು ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.

ಅಬಕಾರಿ ಇಲಾಖೆ ವಿಫಲ: ಬಡಕೇಗುಡ್ಲು ಗ್ರಾಮದಲ್ಲಿ ದಿನನಿತ್ಯ ಅಕ್ರಮ ಮದ್ಯ ಮಾರಟವಾಗುತ್ತಿದೆ. ಇದರಿಂದ ಊರಿನ ಶಾಂತಿಗೆ ಭಂಗವಾಗುತ್ತಿದೆ ದಯಮಾಡಿ ಕ್ರಮಕೈಗೊಳ್ಳಿ ಎಂದು ಊರಿನ ಗ್ರಾಮಸ್ಥರು ಅನೇಕ ಬಾರಿ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮಕೈಗೊಳ್ಳದ ಅಬಕಾರಿ ಇಲಾಖೆಯ ವರ್ತನೆಗೆ ಊರಿನ ಗ್ರಾಮಸ್ಥರೆ ಸೇರಿ ಊರಿನಲ್ಲಿ ಮದ್ಯಮಾರಾಟ ಮಾಡದಂತೆ ಕ್ರಮಕೈಗೊಂಡಿದ್ದಾರೆ.

ಕುಡಿದ ಅಮಲಿನಲ್ಲಿ ಜನರು ದಿನನಿತ್ಯ ಊರಿನಲ್ಲಿ ಗಲಾಟೆ ಮಾಡುತ್ತಿದ್ದರು, ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದರು, ಆದರೆ ಊರಿನ ಗ್ರಾಮಸ್ಥರು ಮದ್ಯ ನಿಷೇಧ ಮಾಡಿದ ದಿನದಿಂದ ಊರು ಶಾಂತಿಯುತವಾಗಿದೆ, ಅಬಕಾರಿ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದರೂ, ಒಂದು ದಿನವೂ ಬಂದು ಯಾವುದೇ ಕ್ರಮಕೈಗೊಳ್ಳಲಿಲ್ಲ
ಆರ್.ನಚಿಕೇತ್, ಬಡಕೇಗುಡ್ಲು

Get real time updates directly on you device, subscribe now.

Comments are closed.

error: Content is protected !!