ಕುಣಿಗಲ್: ಫೆಂಗಲ್ ಚಂಡ ಮಾರುತದ ಪರಿಣಾಮ ಭಾನುವಾರ ರಾತ್ರಿ ಪ್ರಾರಂಭವಾದ ಮಳೆ ತಾಲೂಕಿನಾದ್ಯಂತ ಸುರಿಯ ತೊಡಗಿದ್ದು ಸಾರ್ವಜನಿಕರು ಚಳಿಗಾಲದ ಚಂಡಮಾರುತದ ಮಳೆಗೆ ಹೈರಾಣಾಗಿದ್ದಾರೆ.
ಭಾನುವಾರ ಸಂಜೆಯಿಂದಲೆ ಜೆಡಿ ಮಳೆಯಂತೆ ಆರಂಭವಾದ ಮಳೆ ರಾತ್ರಿ ಇಡೀ ಕೆಲವೊಮ್ಮೆ ಜೋರಾಗಿ ಕೆಲವೊಮ್ಮ ನಿಧಾನವಾಗಿ ಸುರಿಯ ತೊಡಗಿತು, ಚಂಡಮಾರುತದ ಕಾರಣ ಮಳೆನೀರು ಬಹಳ ತಂಪಾಗಿದ್ದರಿಂದ ಬೀದಿ ಬದಿ ಹೂವಿನ, ತರಕಾರಿ, ಹಣ್ಣು ಮಾರಾಟ ಗಾರರು ಪರದಾಡು ವಂತಾಯಿತು, ತಾಲೂಕಿನಾದ್ಯಂತ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆದಿದ್ದು ಶೇಕಡಾ ಐವತ್ತರಷ್ಟು ಬೆಳೆ ಕಟಾವಿಗೆ ಹಂತಕ್ಕೆ ಬಂದಿದೆ, ಭಾನುವಾರದಿಂದ ಆರಂಭವಾಗಿ ಸೋಮವಾರ ರಾತ್ರಿಯಾದರೂ ಮಳೆ ನಿಲ್ಲದ ಪರಿಣಾಮ ರಾಗಿ ಬೆಳೆದ ರೈತರು ತೀವ್ರ ಆತಂಕದಲ್ಲಿದ್ದಾರೆ, ರಾಗಿ ಬೆಳೆ ಬಹಳಷ್ಟು ಕಡೆಗಳಲ್ಲಿ ಮಳೆಯ ರಭಸಕ್ಕೆ ತೆನೆಗಳು ನೆಲಕ್ಕೆ ಒರಗಿವೆ, ಮಳೆ ನಾಳೆಯೊಳಗೆ ನಿಂತು ಬಿಸಿಲು ಬರದಿದ್ದರೆ ಬೆಳೆದ ಬೆಳೆ ಕೈತಪ್ಪುವ ಆತಂಕದಲ್ಲಿ ತಾಲೂಕಿನ ರಾಗಿ ಬೆಳೆಗಾರರಿದ್ದು ಮಳೆ ಯಾವಾಗ ನಿಲ್ಲುತ್ತೋ ಎಂದು ಆಗಸದತ್ತ ಮುಖ ಮಾಡಿ ಕುಳಿತಿದ್ದಾರೆ.
ಕಳೆದ ಕೆಲ ತಿಂಗಳ ಮಳೆಯಲ್ಲಿ ತುಂಬಿ ಕೋಡಿಯಾಗಿದ್ದ ಕೆರೆ ಕಟ್ಟೆಗಳು ಚಂಡಮಾರುತದ ಮಳೆಗೆ ಮತ್ತೊಮ್ಮೆ ಕೋಡಿಯಾಗುವಂತಾಗಿದೆ, ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ವರೆಗೆ ತಾಲೂಕಿನ ನಿಡಸಾಲೆಯಲ್ಲಿ 5.2, ಹುಲಿಯೂರುದುರ್ಗ 10, ಕುಣಿಗಲ್ 3.2, ಅಮೃತೂರು 4.1, ಮಾರ್ಕೋನ ಹಳ್ಳಿಯಲ್ಲಿ 6.4, ಸಂತೇಪೇಟೆಯಲ್ಲಿ 12.4 ಮಿಲಿಮೀಟರ್ ಮಳೆಯಾದರೆ, ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಸೋಮವಾರ ಮಧ್ಯಾಹ್ನ ಒಂದುವರೆ ಗಂಟೆಗೆ ನಿಡಸಾಲೆ ಮಳೆ ಮಾಪನ ಕೇಂದ್ರದಲ್ಲಿ 73.5 ಮಿ.ಮೀ ಮಳೆ ದಾಖಲಾಗಿದೆ, ಈಭಾಗದ ರೈತರು ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಇದೆ ರೀತಿ ಸೋಮವಾರ ರಾತ್ರಿಯೂ ಮಳೆ ಸುರಿದರೆ ಏನೆಂಬ ಚಿಂತೆ ಕಾಡುತ್ತಿದೆ ಎನ್ನುತ್ತಿದ್ದಾರೆ.
Comments are closed.