ಶಿರಾ: ಡಿಸೆಂಬರ್ 09 ರಿಂದ ಆರಂಭಗೊಳ್ಳುವ ರಾಜ್ಯ ವಿಧಾನಸಭೆ ಬೆಳಗಾವಿ ಅಧಿವೇಶನದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಸದ ವಾಹನ ಚಾಲಕರನ್ನು ಮತ್ತು ಲೋಡರ್, ಕ್ಲೀನರ್, ಘನ ತ್ಯಾಜ ವಿಲೇವಾರಿ ಘಟಕ ಕಾರ್ಮಿಕರು ಮತ್ತು ಕಾವಲುಗಾರರನ್ನು ಹಾಗೂ ಉಳಿದ ಕಾರ್ಮಿಕರನ್ನು ನೇರ ಪಾವತಿಗೆ ತರಲು ಮತ್ತು ಖಾಯಂ ಗೊಳಿಸಲು ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಹೊರಗುತ್ತಿಗೆ ಪೌರ ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ 10,000 ಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರದಲ್ಲಿ ಕಸ ಸಾಗಿಸುವ ವಾಹನ ಚಾಲಕರು ಲೋಡರ್, ಕ್ಲೀನರ್ಸ್, ಘನ ತ್ಯಾಜ ವಿಲೆವಾರಿ ಘಟಕ ಕಾರ್ಮಿಕರು ಮತ್ತು ಕಾವಲುಗಾರರನ್ನು ಹಾಗೂ ಉಳಿದ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 2017 ಹಾಗೂ 2023ರ ನೇಮಕಾತಿ ಸಂದರ್ಭಗಳಲ್ಲಿಯೂ ಕಸ ಗುಡಿಸುವ ಪೌರ ಕಾರ್ಮಿಕರಿಗೆ ಮಾತ್ರ ಗುತ್ತಿಗೆ ರದ್ದು ಪಡಿಸಿ ನೇಮಕಾತಿ ಗೊಳಿಸಲಾಯಿತು, ಆದರೆ ಪೌರ ಕಾರ್ಮಿಕರ ಜೊತೆಗೆ ಕರ್ತವ್ಯ ನಿರ್ವಹಿಸುತ್ತಿರುವ ಈ ಹೊರ ಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿಗೂ ತರಲಿಲ್ಲ ಮತ್ತು ನೇಮಕಾತಿಗೂ ಪರಿಗಣಸಲಿಲ್ಲ, 1964ರ ಮುನ್ಸಿಪಾಲ್ ಕಾಯ್ದೆಯ ಪ್ರಕಾರ ಈ ಹೊರಗುತ್ತಿಗೆ ನೌಕರರು ಸಹ ಪೌರ ಕಾರ್ಮಿಕರೆಂದು ಪರಿಗಣಸಲಾಗಿದೆ, ಆದರೆ ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ಈ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಸಹ ದೊರಕುತ್ತಿಲ್ಲ, ಇದರಿಂದಾಗಿ ಗುತ್ತಿಗೆ ಏಜೆನ್ಸಿಗಳ ಕಿರುಕುಳ ನಿರಂತರವಾಗಿದ್ದು 2022ರ ಜುಲೈ 1 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರನ್ನು ನೇರ ಪಾವತಿಗೆ ತರಲು ಅಧಿಕೃತ ಲಿಖಿತ ತೀರ್ಮಾನವಾಗಿದ್ದರು ಸಹ ಅದನ್ನು ಸಹ ಜಾರಿಗೊಳಿಸಲು ಅಧಿಕಾರಿಗಳು ನಿರ್ಲಕ್ಷತೆ ತೋರಿದ್ದಾರೆ, ಈ ಹಿನ್ನಲೆಯಲ್ಲಿ ನಗರಸಭೆ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರ ಪಾವತಿ ಕೈಗೊಂಡ ಕ್ರಮಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಹಾಗೂ ಕಾಲಮಿತಿಯೊಳಗೆ ನೇರ ಪಾವತಿ ಜಾರಿಗೆ ತರಲು ಕೈಗೊಂಡ ಕ್ರಮಗಳ ಕುರಿತು ಶಿರಾ ಕ್ಷೇತ್ರದ ಶಾಸಕರಾಗಿ ತಮ್ಮ ಶಿರಾ ನಗರಸಭೆಯ 37 ಜನ ಹೊರಗುತ್ತಿಗೆ ನೌಕರರ ಭವಿಷ್ಯದ ದೃಷ್ಟಿಯಿಂದ ತಾವುಗಳು ಅಗತ್ಯ ಪ್ರಶ್ನಾವಳಿಗಳನ್ನು ಸರ್ಕಾರದ ಮುಂಡಿಡುವಂತೆ ಶಿರಾ ನಗರಸಭೆಯ ಎಲ್ಲಾ ಹೊರಗುತ್ತಿಗೆ ನೌಕರರು ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರಾದ ಕಂಬಣ್ಣ, ರಂಗನಾಥ್, ದರ್ಶನ್, ಮಣಿ ಸೇರಿದಂತೆ ಹಲವರು ಹಾಜರಿದ್ದರು.
Comments are closed.