ಗುಬ್ಬಿ: ಪಟ್ಟಣದಲ್ಲಿ ಯುಜಿಡಿ ಯೋಜನೆ ಇನ್ನೂ 6 ತಿಂಗಳಲ್ಲಿ ಪರಿ ಪೂರ್ಣಗೊಳ್ಳುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮಲಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ 2.81 ಲಕ್ಷ ಅನುದಾನ ಬಿಡುಗಡೆ ಯಾಗಿದ್ದು, ಅದರಲ್ಲಿ ಕಾಮಗಾರಿ ಮಾಡಲಾಗುತ್ತದೆ ಮತ್ತು ಪಟ್ಟಣದ ಒಳ ಚರಂಡಿ ವ್ಯವಸ್ಥೆ ಮುಂದುವರೆದ ಭಾಗವಾಗಿ ಮಿಸ್ಸಿಂಗ್ ಲಿಂಕ್ಸ್ ಹಾಗೂ ಮನೆ ಮನೆ ಸಂಪರ್ಕ ನಲ್ಲಿ ಸೇರಿದಂತೆ ಇತರೆ ಉಳಿದ ಕಾಮಗಾರಿಗಳಿಗೆ ಅಂದಾಜು 32 ಕೋಟಿಯಷ್ಟು ಹಣ ಬೇಕಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಹಣ ಬಿಡುಗಡೆ ಆದ ಕೂಡಲೇ ಪಟ್ಟಣದ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭೆಯಲ್ಲಿ ಬೀದಿ ದೀಪ ಸರಿಪಡಿಸುವ ಕೆಲಸದಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದು, ಕೆಟ್ಟು ಹೋಗಿರುವ ದೀಪವನ್ನು ಮತ್ತೆ ಹಾಕುವುದಕ್ಕೆ ಮೀನಾ ಮೇಷ ಎಣಿಸುತ್ತಿದ್ದಾರೆ, ಕೂಡಲೇ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಎಲ್ಲಾ ಸದಸ್ಯರು ಸಭೆಯಲ್ಲಿ ತಿಳಿಸಿದರು.
ಇನ್ನು ಓವರ್ ಹೆಡ್ ಟ್ಯಾಂಕ್ ಡೆಮಾಲಿಶ್ ಮಾಡಲು ಸಹ 12 ಲಕ್ಷ ಹಣ ಕೇಳಿದ್ದು ಮತ್ತೆ ನವೀಕರಣ ಮಾಡಲು ಸುಮಾರು 174 ಲಕ್ಷ ಬೇಕಾಗಿರುವುದರಿಂದ ಅದರ ಬಗ್ಗೆ ಸಹ ಚರ್ಚೆ ನಡೆದವು, ಇನ್ನು ಕುಡಿಯುವ ನೀರು ರಸ್ತೆ ಪಟ್ಟಣ ಪಂಚಾಯಿತಿಯ ಮಳಿಗೆಗಳು ನೂತನ ಮಳಿಗೆಗಳ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ವಿಷಯ ಚರ್ಚೆಗೆ ಬಂದವು.
ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ ಜಾಗ ಬಿಟ್ಟುಕೊಟ್ಟಂತಹ ಜಾಗದ ಮಾಲೀಕರಿಗೆ ಗೌರವ ಸಲ್ಲಿಸಲಾಯಿತು.
ಶಾಸಕ ಶ್ರೀನಿವಾಸ್ ಮಾಧ್ಯಮದ ಜೊತೆಯಲ್ಲಿ ಮಾತನಾಡಿ ಆಡಳಿತ ಪಕ್ಷ ಇರುವುದರಿಂದ ಸಾಮಾನ್ಯವಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು 3 ಕ್ಷೇತ್ರಗಳ ಮತದಾರರು ಒಪ್ಪಿಕೊಂಡು ಗೆಲುವು ಕೊಟ್ಟಿದ್ದಾರೆ, ಬಿಜೆಪಿ ಎರಡು ಬಣಗಳಾಗಿ ಹೋಗುತ್ತಿವೆ ಎಂದರೆ ಅದು ಅವರ ಆಂತರಿಕ ಸಮಸ್ಯೆ ಹೊರತು ಇದರಲ್ಲಿ ಯಾವುದೇ ರೀತಿಯ ಸರ್ಕಾರದ ಜವಾಬ್ದಾರಿ ಇಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಗಳ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ತಹಶೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುಳಾ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.
Comments are closed.