ಜಿಂಕೆ ಮೃತದೇಹ ಪತ್ತೆ

258

Get real time updates directly on you device, subscribe now.

ಮಧುಗಿರಿ: ಸುಮಾರು 5 ವರ್ಷ ಪ್ರಾಯದ ಹೆಣ್ಣು ಜಿಂಕೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಪಟ್ಟಣದ ಬೈಪಾಸ್ ಸಮೀಪವಿರುವ ಮಧುವೈನ್ಸ್ ಹಿಂಭಾಗದಲ್ಲಿ ಜಿಂಕೆಯ ಕಳೆಬರ ಪತ್ತೆಯಾಗಿದ್ದು, ಈ ಮೊದಲು ರಾತ್ರಿ ಸುರಿದ ಮಳೆ ಹಾಗೂ ಸಿಡಿಲಿನಿಂದ ಜಿಂಕೆ ಮೃತಪಟ್ಟಿದೆ ಎಂದು ಹೇಳಲಾಗುತ್ತಿತ್ತು.
ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ವೈದ್ಯರು ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಜಿಂಕೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುರಾಜ್ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿದರು.

Get real time updates directly on you device, subscribe now.

Comments are closed.

error: Content is protected !!