ಪ್ರಾಮಾಣಿಕ ಹೋರಾಟಗಾರರ ಜೀವನ ಚರಿತ್ರೆ ಓದಿ

ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಪುಸ್ತಕ ಬಿಡುಗಡೆ

13

Get real time updates directly on you device, subscribe now.


ತುಮಕೂರು: ದಲಿತ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಪ್ರಾಮಾಣಿಕ ಹೋರಾಟಗಾರರ ಜೀವನ ಚರಿತ್ರೆಗಳನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಕಟಿಸುವ ಮೂಲಕ, ಭವಿಷ್ಯದ ಚಳವಳಿಗಾರರಿಗೆ ಮಾರ್ಗದರ್ಶನ ಮಾಡುವ ಅಗತ್ಯವಿದೆ ಎಂದು ಪ್ರೊ.ಕಾಳೇಗೌಡ ನಾಗವಾರ ತಿಳಿಸಿದ್ದಾರೆ.
ನಗರದ ಗ್ರಂಥಾಲಯ ಸಭಾಂಗಣದಲ್ಲಿ ದಲಿತ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿ ಅವರ ಕುರಿತ ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ದಸಂಸ ಹೋರಾಟಗಾರರಾದ ಬೆಲ್ಲದಮಡು ರಂಗಸ್ವಾಮಿಯವರ ಬದ್ಧತೆ ಮತ್ತು ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿವೆ, ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ರೀತಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದ ವರನ್ನು ಯುವಜನತೆಗೆ ಪರಿಚಯಿಸುವ ಮೂಲಕ ವಾಸ್ತವಕ್ಕೆ ಹತ್ತಿರವಾದ ಹೋರಾಟ ರೂಪಿಸಲು ಸಾಧ್ಯ ಎಂದರು.

ಲೋಹಿಯಾ ಮತ್ತು ಅಂಬೇಡ್ಕರ್ ಈ ಭರತ ಖಂಡದ ಇಂಚಿಂಚು ಬಲ್ಲವರಾಗಿದ್ದರೂ ಆದರೂ ದಲಿತರ ಬದುಕು ಕುರಿತು ಲೋಹಿಯಾಗಿಂತ ಅಂಬೇಡ್ಕರ್ ಹೆಚ್ಚು ಅರಿತಿದ್ದರು.ಜ್ಞಾನಕ್ಕಿಂತಲೂ ಮಿಗಿಲು ಬೇರಿಲ್ಲ ಎಂಬುದ ಅರಿತಿದ್ದ ಅಂಬೇಡ್ಕರ್, ಜ್ಞಾನ ಸಂಪಾದನೆಯ ಜೊತೆಗೆ ಸಮುದಾಯದ ಸಾಮಾಜಿಕ ಸಮಾನತೆಗಾಗಿ ಸಂಸಾರ ಮರೆತರು, ಆದರೆ ರಂಗಸ್ವಾಮಿ ಬೆಲ್ಲದಮಡು ಅವರು, ಚಳವಳಿಯ ಜೊತೆಗೆ ಮನೆಯ ಹಿರಿಯನಾಗಿ ತಮ್ಮಂದಿರು, ತಂಗಿಯನ್ನು ಓದಿಸಿ ಮದುವೆ ಮಾಡಿ ಹಿರಿಯರ ಜವಾಬ್ದಾರಿ ನಿರ್ವಹಿಸಿದರು ಎಂದು ಪ್ರೊ.ಕಾಳೇಗೌಡ ನಾಗಾವರ ತಿಳಿಸಿದರು.

ಕರ್ಮಯೋಗಿ ರಂಗಸ್ವಾಮಿ ಬೆಲ್ಲದಮಡು ಎಂಬ ಪುಸ್ತಕ ಬಿಡುಗಡೆ ಮಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿದ್ದ ದಿನಗಳಿಂದಲೂ ನನಗೆ ರಂಗಸ್ವಾಮಿ ಬೆಲ್ಲದಮಡು ಪರಿಚಿತರು, ನಾನು ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದವರು, ಅವರ ಹೆಸರಿನ ಈ ಪುಸ್ತಕ ಅವರ ಬದುಕಿನ ಬಾವುಕ ರೂಪಕವಾಗಿದೆ, ಬಹುತೇಕ ಲೇಖಕರು ತಮ್ಮ ಹೃದಯದ ಮಾತುಗಳನ್ನಾಡಿದ್ದಾರೆ, ಎಲ್ಲಿಯೂ ಕೃತಕತೆ ಇಲ್ಲ, ಆದರ್ಶ ಹೋರಾಟಗಾರನ ಸಾರ್ಥಕ ಮಾದರಿಯಾಗಿದೆ, ರಂಗಸ್ವಾಮಿ ಬೆಲ್ಲದಮಡು ಅವರು ತಮ್ಮ ಬದುಕಿನು ದ್ದಕ್ಕೂ ಸಿದ್ಧಾಂತಗಳ ಜೊತೆಗೆ ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡು ಬಂದವರು, ಓರ್ವ ಹೋರಾಟಗಾರನಿಗೆ ಪ್ರಾಮಾಣಿಕತೆ ಮತ್ತು ಬದ್ಧತೆ ಅತಿ ಮುಖ್ಯ, ಆತ ಮಾತ್ರ ಜನನಾಯಕನಾಗಿ ಜನರ ನಡುವೆ ಉಳಿಯಲು ಸಾಧ್ಯ ಎಂಬುದಕ್ಕೆ ತೋರಿಸಿದವರು, ಸಂಸಾರ ಮತ್ತು ಸಮಾಜ ಎರಡನ್ನು ಸರಿದೂಗಿಸಿದವರು, ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ಸಂಚಾಲಕಿಯನ್ನು ನೇಮಿಸಿದ ಕೀರ್ತಿ ಅವರದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ದೊರೆರಾಜು ಮಾತನಾಡಿ, ಬಹಳ ಜನರಿಗೆ ಹೋರಾಟಗಾರರ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ, ಮುಂದಿನ ಪೀಳಿಗೆಗೆ ಹೋರಾಟದ ಕಿಚ್ಚು ಹಚ್ಚುವ ನಿಟ್ಟಿನಲ್ಲಿ ಈ ಪುಸ್ತಕ ಬಹಳ ಸಹಕಾರಿ ಯಾಗಿದೆ ಎಂದರು.
ಕರ್ಮಯೋಗಿ ರಂಗಸ್ವಾಮಿ, ಡಾ.ಮುರುಳೀಧರ ಬೆಲ್ಲದಮಡು, ದಸಂಸ ಹೋರಾಟಗಾರರಾದ ಕೋಲಾರ ವೆಂಕಟೇಶ, ಡಾ.ಪಾವನ, ಡಾ.ಶಿವಣ್ಣ ತಿಮ್ಮಲಾಪುರ, ದಸಂಸದ ಮುಖಂಡರಾದ ನರಸಿಂಹಯ್ಯ, ನರಸಿಂಹಮೂರ್ತಿ, ಕೃಷ್ಣಪ್ಪ ಬೆಲ್ಲದಮಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!