ತುಮಕೂರು: ನಗರದ ಕುವೆಂಪು ನಗರದ ಕುವೆಂಪು ವೃತ್ತದ ನಾಗರಕಟ್ಟೆ ಭಕ್ತರ ಬಳಗದಿಂದ ಸುಬ್ರಹ್ಮಣ್ಯ ಸ್ವಾಮಿಸ್ವರೂಪ ನಾಗದೇವತೆಯ 7ನೇ ವಾರ್ಷಿಕೋತ್ಸವ ಹಾಗೂ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶನಿವಾರ ವಿಶೇಷ ಪೂಜೆ, ಹೋಮ ಮತ್ತಿತರ ಧಾಮಿಕ ಕಾರ್ಯಕ್ರಮ ವೈಭವದಿಂದ ನೆರವೇರಿದವು.
ಇದರ ಅಂಗವಾಗಿ ಶುಕ್ರವಾರ ಸಂಜೆ ಮಹಾ ಗಣಪತಿ ಪೂಜೆ, ಸ್ವಸ್ಥಿ ಪುಣ್ಯಾಹ ವಾಚನ, ದೇವನಾಂದಿ ಕಳಸ ಸ್ಥಾಪನೆ, ವಾಸ್ತು ಹೋಮ ಹಮ್ಮಿಕೊಳ್ಳಲಾಗಿತ್ತು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರ ಗಣ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶನಿವಾರ ಬೆಳಗಿನಿಂದಲೂ ಸುಬ್ರಹ್ಮಣ್ಯ ಸ್ವಾಮಿಗೆ ವಿವಿಧ ಪೂಜೆ ಅಲಂಕಾರ, ಕಳಸಾರಾಧನೆ, ಪೂರ್ವಕ ಮಹಾ ಗಣಪತಿ ಸಮೇತ ನಾಗಸುಬ್ರಹ್ಮಣ್ಯೇಶ್ವರ ಹೋಮ, ಲಕ್ಷ್ಮೀನಾರಾಯಣ ಹೋಮ, ಅಶ್ವತ್ಥನಾರಾಯಣ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು, ವಲ್ಲಿಸೇನಾ ದೇವಸೇನಾ ಸಮೇತ ಸುಬ್ರಹ್ಮಣ್ಯ ಸ್ವಾಮಿಗೆ ಕಲ್ಯಾಣೋತ್ಸವ ಸೇವೆ ಮಾಡಲಾಯಿತು, ಇದರ ಪ್ರಯುಕ್ತ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು, ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ನಾಗದೇವತೆಗೆ ಹಾಲೆರೆದು ಪೂಜೆ ಸಲ್ಲಿಸಿದರು.
ನಾಗರಕಟ್ಟೆ ಬಳಗದ ಮಂಜುನಾಥ್, ಶ್ರೀನಿವಾಸ್, ರಮೇಶ್, ಸುಧಾಕರ್, ರಂಗಸ್ವಾಮಿ, ದೇವರಾಜು, ಚಂದ್ರಶೇಖರ ಪಾಚಿ, ಜಯಪ್ರಕಾಶ್, ರವಿಕುಮಾರ್, ಧನುಷ್ ಮೊದಲಾದವರು ಕಾರ್ಯಕ್ರಮ ಸಂಘಟನೆಗೆ ಶ್ರಮಿಸಿದ್ದರು.
Comments are closed.