ಚಿಂದಿ ಆಯುವ ಕೆಲಸಕ್ಕೆ ನೂಕುತ್ತಿದ್ದವನ ಬಂಧನ

443

Get real time updates directly on you device, subscribe now.

ಕುಣಿಗಲ್: ಸಲ್ಯೂಷನ್ ಸೇವಿಸುತ್ತಾ ಬೀದಿ ಬೀದಿ ಅಲೆಯುತ್ತಿದ್ದ ಮಕ್ಕಳನ್ನು ವ್ಯಕ್ತಿಯೊಬ್ಬರು ಮಕ್ಕಳಿಗೆ ಬಲವಂತವಾಗಿ ಸಲ್ಯೂಷನ್ ನೀಡಿ ಅವರಿಂದ ಚಿಂದಿ ಆಯಿಸುತ್ತಾ ಅದರಿಂದ ಬಂದ ಹಣವನ್ನು ಮಕ್ಕಳಿಂದ ಬಲವಂತವಾಗಿ ಪಡೆಯುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದೆ ಪಟ್ಟಣದ ಬೀದಿ ಬೀದಿಯಲ್ಲಿ ಸಲ್ಯೂಷನ್ ಸೇವಿಸುತ್ತಾ ಚಿಂದಿ ಆಯುತ್ತಿರುವ ಮಕ್ಕಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗೌತಮ್ ಇತರರು ಸ್ಥಳೀಯಾಧಿಕಾರಿಗಳ ಸಹಾಯದಿಂದ ಕಾರ್ಯಾಚರಣೆಗೆ ಇಳಿದಾಗ ರಾಮಪ್ರಸಾದ್ ಎಂಬಾತ ನಾಲ್ಕು ವರ್ಷದ ಬಾಲಕನ ರಕ್ಷಣೆ ಮಾಡಿ ಅಧಿಕಾರಿಗಳಿಗೆ ನೀಡಿದ್ದರು. ನಂತರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪಟ್ಟಣದ ಮದ್ದೂರು ರಸ್ತೆಯ ದುರ್ಗ ಲಾಡ್ಜ್ ಪಕ್ಕದ ರಸ್ತೆಯಲ್ಲಿ ಇಬ್ಬರು, ಬಾಲಕಿಯರು, ಒಬ್ಬ ಬಾಲಕನನ್ನು, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಇಬ್ಬರು ಬಾಲಕಿಯರನ್ನು ಪೊಲೀಸರ ಸಹಕಾರದಿಂದ ರಕ್ಷಣೆ ಮಾಡಿ ಬಾಲಮಂದಿರಕ್ಕೆ ನೀಡಿದ್ದರು. ಈ ಮಕ್ಕಳೊಂದಿಗೆ ಸಮಾಲೋಚನೆ ಮಾಡಿದಾಗ ರಾಜ್ಗೋಪಾಲ ಎಂಬ ವ್ಯಕ್ತಿ ಮಕ್ಕಳಿಗೆ ಸಲ್ಯೂಷನ್ನೀಡಿ ಚಿಂದಿ ಆಯುವ ಕೆಲಸಕ್ಕೆ ನೂಕಿ ಅವರಿಂದ ಹಣ ಪಡೆಯುತ್ತಿದ್ದು, ಹಣ ನೀಡದೆ ಇದ್ದಲ್ಲಿ ಹೊಡೆಯುತ್ತಿದ್ದ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಕುಣಿಗಲ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ನೀಡಿದ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!