ಡಿ.26ರ ವರೆಗೆ ಡ್ರೋನ್ ಪ್ರತಾಪ್ ಗೆ ಜೈಲು

4

Get real time updates directly on you device, subscribe now.


ಮಧುಗಿರಿ: ಕೃಷಿ ಹೊಂಡದಲ್ಲಿ ಸೋಡಿಯಂ ಸ್ಪೋಟಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಅಂತ್ಯದ ಹಿನ್ನೆಲೆಯಲ್ಲಿ ಡಿ.26ರ ವರೆಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಜನಕಲೋಟಿ ಗ್ರಾಮದಲ್ಲಿ ಇತ್ತೀಚಿಗೆ ಸೋಡಿಯಂ ಸ್ಪೋಟಿಸಿ ವೀಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸುಮೋಟೋ ಪ್ರಕಣ ದಾಖಲಿಸಿಕೊಂಡಿದ್ದರು. ಸೋಡಿಯಂ ಕೊಡಿಸಿದ್ದ ಪ್ರತಾಪ್ ಹಾಗೂ ವೀಡಿಯೋ ಚಿತ್ರೀಕರಿಸಿದ್ದ ವಿನಯ್ ಎಂಬುವವರನ್ನು ಬಂಧಿಸಿದ್ದರು, ಡ್ರೋನ್ ಪ್ರತಾಪ್ 3 ದಿನಗಳ ಪೊಲೀಸ್ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ಡ್ರೋನ್ ಪ್ರತಾಪ್ ನನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿತ್ತು, ನ್ಯಾಯಾಲಯ ಡಿ.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Get real time updates directly on you device, subscribe now.

Comments are closed.

error: Content is protected !!