ಕೊರಟಗೆರೆ: ತಾಲ್ಲೂಕಿನ ಬೀರದೇವನ ಹಳ್ಳಿಯ ತಂಗುದಾಣದ ಹಿಂಭಾಗ ಗಾಂಜಾ ಸೊಪ್ಪು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕೊರಟಗೆರೆ ಪಿ ಎಸ್ ಐ ಚೇತನ್ ಕುಮಾರ್ ನೇತೃತ್ವದ ಪೊಲೀಸರ ತಂಡ ಮಾರುವೇಷದಲ್ಲಿ ದಿಢೀರ್ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿ ತುಂಬಾಡಿ ಗ್ರಾಪಂ ವ್ಯಾಪ್ತಿಯ ಬೀರದೇವನಹಳ್ಳಿ ತಂಗುದಾಣದಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಗಾಂಜಾ ಪೆಡ್ಲರ್ಗಳಿಂದ 1 ಲಕ್ಷ 50 ಸಾವಿರ ರೂ. ಮೌಲ್ಯದ 2 ಕೆಜಿ 400 ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.
ಸಿದ್ದರಬೆಟ್ಟದ ಸೂರ್ಯ ಗುಹೆ ಸಮೀಪದ ಅರಣ್ಯದಲ್ಲಿ ಗಾಂಜಾ ಸೊಪ್ಪಿನ ಗಿಡಗಳನ್ನು ಬೆಳೆದು ಗಿಡ ಬಾಡಿದ ನಂತರ ಸೊಪ್ಪು ಮತ್ತು ಬೀಜ ಎರಡನ್ನೂ ಕೊರಟಗೆರೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕೊರಟಗೆರೆ ಪೊಲೀಸರ ತಂಡ ಭೇದಿಸುವಲ್ಲಿ ಯಶಸ್ವಿಯಾಗಿದೆ.
ಸಿದ್ಧರಬೆಟ್ಟದ ಹೇಮಂತ್ (21) ಮತ್ತು ನೇಗಲಾಲದ ಭೀಮರಾಜು (35) ಬಂಧಿತ ಆರೋಪಿಗಳು, ದಾಳಿಯ ವೇಳೆ ಪಿ ಎಸ್ ಐ ಚೇತನ್, ಸಿಬ್ಬಂದಿ ದೊಡ್ಡಲಿಂಗಯ್ಯ, ಮೋಹನ್, ಪ್ರದೀಪ್, ಸಿದ್ಧರಾಮು ಇದ್ದರು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get real time updates directly on you device, subscribe now.
Prev Post
Comments are closed.