ಪುರಾತನ ಕಲ್ಲಿನ ವಿಷ್ಣು ವಿಗ್ರಹ ಪತ್ತೆ

551

Get real time updates directly on you device, subscribe now.

ಗುಬ್ಬಿ: ಕೆರೆಯಲ್ಲಿ ಹೂಳು ತೆಗೆಯುವ ಸಂದರ್ಭದಲ್ಲಿ ಸುಮಾರು 600 ವರ್ಷಗಳ ಪುರಾತನ ಕಲ್ಲಿನ ವಿಷ್ಣು ವಿಗ್ರಹ ಪತ್ತೆಯಾದ ಘಟನೆ ಮಂಗಳವಾರ ತಾಲ್ಲೂಕಿನ ಹಾಗಲವಾಡಿ ಗ್ರಾಮದಲ್ಲಿ ನಡೆದಿದೆ.
ಕೆರೆಯಲ್ಲಿ ಹೂಳು ತೆಗೆಯುವ ಸುಮಾರು ವರ್ಷಗಳಿಂದ ನಡೆಯದ ಕಾರಣ ಮಣ್ಣು ತೆಗೆಯಲಾಗುತ್ತಿತ್ತು, ಸುಮಾರು 15 ಅಡಿಗಳ ಆಳದಲ್ಲಿ ಜೆಸಿಬಿ ಯಂತ್ರಕ್ಕೆ ಸಿಲುಕಿದ ಈ ವಿಗ್ರಹವನ್ನು ಗ್ರಾಮಸ್ಥರು ಸುರುಕ್ಷಿತವಾಗಿ ಮೇಲೆತ್ತಿದರು, ಕೂಡಲೇ ಪುರಾತತ್ವ ಇಲಾಖೆಗೆ ಮಾಹಿತಿ ರವಾನಿಸಲಾಯಿತು, ನಂತರ ಸ್ಥಳಕ್ಕೆ ಬಂದ ಇತಿಹಾಸ ತಜ್ಞ ಶ್ರೀನಿವಾಸ್ ಅಮ್ಮನಘಟ್ಟ ವಿಗ್ರಹ ಪರಿಶೀಲನೆ ನಡೆಸಿದರು.
ಹೊಯ್ಸಳರ ಕಾಲದ ಈ ವಿಗ್ರಹ ಸುಂದರ ವಿಷ್ಣುಮೂರ್ತಿಯಾಗಿದೆ. ವಿಗ್ರಹದ ಪ್ರಭಾವಳಿ ಸುತ್ತಲಿನಲ್ಲಿ ದಶಾವತಾರದ ಚಿತ್ರಗಳು ಮನಮೋಹಕವಾಗಿದೆ. ಆದರೆ ವಿಗ್ರಹದ ಎರಡೂ ಕೈಗಳು ತುಂಡರಿಸಲಾಗಿದೆ. ಅಂದಿನ ಶತ್ರುಗಳ ದಾಳಿಗೆ ಸಿಲುಕಿದ್ದ ವಿಷ್ಣುಮೂರ್ತಿಯ ಆಕರ್ಷಣೀಯ ಮುಖ ಸಹ ಭಿನ್ನವಾಗಿದೆ. ಹಾಗಲವಾಡಿ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಸಂಬಂಧಿಸಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದ್ದಾರೆ.
ಸುಮಾರು 5 ಅಡಿಗಳ ಈ ಕಲ್ಲು ವಿಗ್ರಹ ಪೂಜೆ ಪುನಸ್ಕಾರ ಪಡೆದಿರಬಹುದು ಎನ್ನಲಾಗಿದೆ. ಸ್ಥಳೀಯ ಹಿರಿಯರು ಚನ್ನಕೇಶವಸ್ವಾಮಿ ದೇವಾಲಯ ಸಹ ಹೊಯ್ಸಳರ ಕಾಲದ್ದಾಗಿದೆ. ಈ ವಿಗ್ರಹ ಇಲ್ಲಿಗೆ ಸಂಬಂಧಿಸಿರಬಹುದು. ದಾಳಿ ನಡೆದ ಸಂದರ್ಭದಲ್ಲಿ ಕೆರೆಯ ಪಾಲಾಗಿದೆ. ಈಗ ವಿಗ್ರಹ ಸಿಕ್ಕಿರುವುದು ಗ್ರಾಮಕ್ಕೆ ಒಳಿತಾಗಲಿದೆ ಎಂದು ನಂಬಿದ್ದಾರೆ. ಸದ್ಯಕ್ಕೆ ಚನ್ನಕೇಶವ ದೇವಾಲಯದಲ್ಲೇ ವಿಗ್ರಹ ಇಡಲಾಗಿದೆ. ಪುರಾತತ್ವ ಇಲಾಖೆ ವಿಗ್ರಹದ ಸ್ಪಷ್ಟ ಚಿತ್ರಣ ನೀಡಲಿದೆ.

Get real time updates directly on you device, subscribe now.

Comments are closed.

error: Content is protected !!