ಕಾರಿನಲ್ಲಿ ಸಾಗಿಸುತ್ತಿದ್ದ 420 ಲೀಟರ್ ಅಕ್ರಮ ಸೇಂದಿ ವಶ

1

Get real time updates directly on you device, subscribe now.


ಮಧುಗಿರಿ: ಅಕ್ರಮವಾಗಿ ಕಾರಿನಲ್ಲಿ ಸೇಂದಿ ಬಾಟಲಿಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿ ಸಹಿತ ಕಾರು ಮತ್ತು 420 ಲೀಟರ್ ಸೇಂದಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಶ್ರಾವಂಡನಹಳ್ಳಿ ಗ್ರಾಮದ ದೊಡ್ಡಮಾಲೂರು- ಚಂದನದೂರು ರಸ್ತೆಯಲ್ಲಿರುವ ಧರ್ಮಶ್ರೀ ಪಬ್ಲಿಕ್ ಶಾಲೆಯ ಮುಂಭಾಗದಲ್ಲಿ ಗಸ್ತಿನಲ್ಲಿದ್ದ ಅಬಕಾರಿ ಇಲಾಖೆ ತಂಡ ಕಾರನ್ನು ಪರಿಶೀಲಿಸಿದಾಗ 9 ಪ್ಲಾಸ್ಟಿಕ್ ಚೀಲಗಳಲ್ಲಿ 1 ಲೀಟರ್ ನ 420 ಪ್ಲಾಸ್ಟಿಕ್ ಬಾಟಲ್ ಗಳಲ್ಲಿ 420 ಲೀಟರ್ ಸೇಂದಿಯೊಂದಿಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಟಾಟಾ ಇಂಡಿಗೋ ಸಿಎಸ್ ಕೆಎ 03, ಎಂಎಚ್ 6207 ಕಾರಿನಲ್ಲಿ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಬೊಮ್ಮಸಂದ್ರ ಗ್ರಾಮದ ಅಶೋಕ್ ಕುಮಾರ್ ಬಿನ್ ನಾಗಪ್ಪ ಎಂಬ ಆರೋಪಿಯನ್ನು ಕಾರಿನ ಸಹಿತಿ ವಶಕ್ಕೆ ಪಡೆದು ಆರೋಪಿಯ ವಿರುದ್ಧ ಕೆಇಎಸಿಟಿ 1965 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ, ದಾಳಿಯಲ್ಲಿ ಡಿವೈಎಸ್ಪಿ ದೀಪಕ್, ಸಬ್ ಇನ್ಸ್ ಪೆಕ್ಟರ್ ಕರಿಬಸಪ್ಪ, ಸಿಬ್ಬಂದಿ ರಾಜೇಶ್, ತೋಸಿಫ್ ಖಾನ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!