ತುಮಕೂರು: ಸರ್ಕಾರದ ದ್ವಂದ್ವ ನೀತಿ ಹಾಗೂ ಕ್ರಷರ್ ಮೇಲೆ ವಿಧಿಸುವ ಹೆಚ್ಚಿನ ರಾಜಧನ ಕ್ರಮವು ಕ್ರಷರ್ ಮಾಲೀಕರಿಗೆ ಮಾರಣ ಹೋಮವಾಗಿದೆ, ಸರ್ಕಾರ ಕ್ರಷರ್ ಗಳಿಗೆ ವಿಧಿಸಿರುವ ನಿಯಮಗಳನ್ನು ಸರಳೀಕರಣ ಗೊಳಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಕ್ರಷರ್ ಮಾಲೀಕರು ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಸಂಘದ ಕಾರ್ಯದರ್ಶಿ ಭಾಸ್ಕರ್ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಕೋಟ್ಯಾಂತರ ರೂ. ಬಂಡವಾಳ ಹೂಡಿರುವ ಕ್ರಷರ್ ಉದ್ದಿಮೆದಾರರು ಸಮರ್ಪಕವಾಗಿ ಉದ್ದಿಮೆ ನಡೆಸಿಕೊಂಡು ಹೋಗಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ, ಈ ಹೊರೆ ಜನರ ತಲೆಮೆಲೆ ಬಿದ್ದು ಜನಸಾಮಾನ್ಯರಿಗೂ ದೊಡ್ಡ ಹೊರೆಯಾಗುತ್ತಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ದಿಲೀಪ್ ಕುಮಾರ್, ಕ್ವಾರಿ ಮಾಲೀಕರಾದ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಬಿ.ಎಸ್.ನಾಗೇಶ್, ಗಣೇಶ್, ಅನೀಫ್, ನಾರಾಯಣ್, ರಂಗಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Comments are closed.