ಕೊಡಿಗೇನಹಳ್ಳಿ: ಕೆಲಸ ಮುಗಿಸಿಕೊಂಡು ಮನೆಗೆ ಹೋಗುತಿದ್ದ ವೇಳೆ ಹೆಣ್ಣು ಮಕ್ಕಳಿಗೆ ಚುಡಾಯಿಸಿದ್ದು ಈ ಬಗ್ಗೆ ದೂರು ಬರೆಸಲು ಹೋಗುತಿದ್ದ ವೇಳೆ ಪುಂಡರ ಗುಂಪು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಕೊಡಿಗೇನಹಳ್ಳಿ ಹೊರವಲಯದ ದಂಡಿಪುರದಲ್ಲಿ ನಂದನ್ ಕುಮಾರ್ ಎಂಬಾತ ತನ್ನ ತಂಗಿ ಹಾಗೂ ದೊಡ್ಡಮ್ಮನ ಮಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ದಂಡಿಮಾರಮ್ಮ ದೇವಸ್ಥಾನದ ಬಳಿ ದಂಡೀಪುರದ ನಿವಾಸಿಗಳಾದ ನವೀನ, ಚಂದ್ರು ಹಾಗೂ ಮೈದನಹಳ್ಳಿಯ ಸತೀಶ ಗ್ಯಾಂಗ್ ಸೇರಿಕೊಂಡು ಹೆಣ್ಣು ಮಕ್ಕಳನ್ನು ನೋಡಿ ಕೇಕೆ ಹಾಕಿ ಶಿಳ್ಳೆ ಹೊಡೆದಿದ್ದಾರೆ, ಈ ಬಗ್ಗೆ ಮಾತಿನ ಚಕಮಕಿ ನಡೆದಿತ್ತು.
ಈ ಬಗ್ಗೆ ನಂದನ್ ಕುಮಾರ್ ದೂರು ಬರೆಸಲು ಹೋಗುತ್ತಿದ್ದಾಗ ಏಕಾಏಕಿ ಬಂದ ಗುಂಪೊಂದು ಗುರುವಾರ ಬೆಳಗ್ಗೆ ಬೈಕ್ ತಡೆದು ಏಕಾಏಕಿ ಬಂದು ಗಲಾಟೆ ಮಾಡಿ ನೀನು ದೂರು ನೀಡಿದರೆ ನಿನಗೆ ಕೊಲೆ ಮಾಡುತ್ತೇವೆ ಎಂದು ಬೆದರಿಸಿ ಚಾಕುವಿನಿಂದ ತಿವಿಯಲು ಯತ್ನಿಸಿದ್ದು ಅಕ್ಕಪಕ್ಕದವರು ಜಗಳ ಬಿಡಿಸಲು ಯತ್ನಿಸಿದ್ದಾರೆ.
ಚಂದ್ರು ಎಂಬಾತ ಎಡ ತಲೆಗೆ, ಎಡ ಭುಜಕ್ಕೆ, ಚಾಕುವಿನಿಂದ ತಿವಿದಿದ್ದು ತಕ್ಷಣ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರ್ಸಾವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಗಿರುತ್ತದೆ, ಚಂದ್ರು, ನವೀನ್, ಸತೀಶ್ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Comments are closed.