ದಿ.ಪುನೀತ್ ಪುತ್ಥಳಿ ತೆರವು- ಅಭಿಮಾನಿಗಳ ಆಕ್ರೋಶ

4

Get real time updates directly on you device, subscribe now.


ತಿಪಟೂರು: ನಟ ದಿ.ಪುನೀತ್ ರಾಜ್ ಕುಮಾರ್ ಪುತ್ಥಳಿಯನ್ನು ಗುರುವಾರ ರಾತ್ರಿ 11.35 ರಲ್ಲಿ ಪ್ರತಿಷ್ಠಾಪನೆ ಮಾಡಿ ಶುಕ್ರವಾರ ಬೆಳಗಿನ ಜಾವ 5.40 ರ ಸಮಯದಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಪೊಲೀಸರು ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ ಘಟನೆ ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.

ಪುತ್ಥಳಿ ನಿರ್ಮಾಣಕ್ಕೆ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಗೆ ಅನುಮತಿ ಕೋರಿ ಡಿ.18 ರಂದು ಕನ್ನಡ ರಕ್ಷಣಾ ವೇದಿಕೆ ಅಪ್ಪು ಸೇನೆಯ ಹೋಬಳಿ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ ಪಿಡಿಒ ರಜಾಯಿದ್ದ ಕಾರಣ ಕಂಪ್ಯೂಟರ್ ಅಪರೇಟರ್ ಗೀತಾಗೆ ಅರ್ಜಿ ನೀಡಿದ್ದು ಅವರು ಗ್ರಾಪಂ ಕಡತದಲ್ಲಿ ಅರ್ಜಿ ಸ್ವೀಕೃತಿಯಲ್ಲಿ ದಾಖಲು ಮಾಡಿರುವುದಿಲ್ಲ, ಅನುಮತಿಗೆ ಅರ್ಜಿ ಸಲ್ಲಿಸಿದ್ದರಿಂದ ಕರವೇ ಪದಾಧಿಕಾರಿಗಳು ಗುರುವಾರ ಮಧ್ಯರಾತ್ರಿ ಪುತ್ಥಳಿ ಅನಾವರಣಗೊಳಿಸಿದ್ದು ಬೆಳಗಿನ ಜಾವ ಪೂಜೆ ಮಾಡಲು ತೆರಳುವಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪುತ್ಥಳಿ ತೆರವುಗೊಳಿಸಿ ಪುತ್ಥಳಿಯನ್ನು ಕೆಲ ಕಾಲ ಠಾಣೆಯಲ್ಲಿ ಇಟ್ಟುಕೊಂಡು ನಂತರ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಪಿ.ಶಿವನಂಜೇಗೌಡ ನೀಡಿದ್ದಾರೆ.

ಪುತ್ಥಳಿ ಹಸ್ತಾಂತರ ಮಾಡುವಾಗ ಯಾವುದರಿಂದ ಪುತ್ಥಳಿ ನಿರ್ಮಾಣ ಮಾಡಲಾಗಿದೆ, ಎಷ್ಟು ಎತ್ತರ, ಅಗಲ, ಎಲ್ಲಿ ಮಾಡಲಾಗಿತ್ತು ಎಂಬ ಯಾವುದು ಸಹ ನಮೂದಿಸಿಲ್ಲ, ಪುತ್ಥಳಿ ನಿರ್ಮಾಣ ಪೊಲೀಸ್ ಠಾಣೆ ಪಕ್ಕದಲ್ಲಿ ಪುತ್ಥಳಿದಲ್ಲಿದ್ದು ರಾಜ್ಯ ಹೆದ್ದಾರಿ 47 ಮಂಡ್ಯ ಹೂವಿನಹಡಗಲಿ ಪಕ್ಕದಲ್ಲೇ ಹಾದು ಹೋಗಿದ್ದು ಕೋರ್ಟ್ ಆದೇಶದಂತೆ ಇಲ್ಲಿ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಶಿವನಂಜೇಗೌಡ ತಿಳಿಸಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಹೊನ್ನವಳ್ಳಿ ಠಾಣೆಯ ಚಂದ್ರಕಾಂತ್, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶಿವಕುಮಾರ್ ಭೇಟಿ ನೀಡಿದ್ದರು.

Get real time updates directly on you device, subscribe now.

Comments are closed.

error: Content is protected !!