ಸತತ ಪರಿಶ್ರಮದಿಂದ ಸಾಧನೆ ಸಾಧ್ಯ

3

Get real time updates directly on you device, subscribe now.


ಕುಣಿಗಲ್: ಯಾವುದೇ ಮಗು ಹುಟ್ಟಿನಿಂದ ದಡ್ಡ, ಬುದ್ಧಿವಂತನಾಗಿರುವುದಿಲ್ಲ, ಸತತ ಪರಿಶ್ರಮದಿಂದ ಮುನ್ನಡೆದಾಗ ಬುದ್ಧಿವಂತ ನಾಗುತ್ತಾನೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕೆ.ರಾಮಕೃಷ್ಣ ರೆಡ್ಡಿ ಹೇಳಿದರು.
ಶನಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್ ಎಸ್ ಎಸ್, ಯುವ ರೆಡ್ ಕ್ರಾಸ್, ದಿ ಭಾರತ್ ಸ್ಕೌಟ್ ಮತ್ತು ಗೈಡ್ಸ್, ಐಕ್ಯೂಎಸಿ ಇತರೆ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯುವ ವಿದ್ಯಾರ್ಥಿಗಳಿಗೆ ಉತ್ತಮ ಗುರಿ ಇರಬೇಕು, ಅಂತೆಯೆ ಗುರಿ ಸಾಧಿಸಲು ಉತ್ತಮ ಯೋಜನೆ ಹಾಕಿಕೊಳ್ಳಬೇಕು, 18-23 ವಯೋ ಮಾನದ ಎಲ್ಲಾ ಯುವ ವಿದ್ಯಾರ್ಥಿಗಳಿಗೆ ತಮ್ಮದೆ ಅದ ಆದರ್ಶ ವ್ಯಕ್ತಿ ಇರುತ್ತಾರೆ, ಆದರೆ ಆ ಆದರ್ಶ ವ್ಯಕ್ತಿ ಆಸ್ಥಾನಕ್ಕೆ ಬರಲು ಕನಿಷ್ಟ 20-30 ವರ್ಷದ ಶ್ರಮ ಇರುತ್ತದೆ ಎಂಬುದ ಮರೆಯಬಾರದು, ಪದವಿ ವ್ಯಾಸಂಗದ 3-7 ವರ್ಷ ಶ್ರಮಪಟ್ಟು ಅಧ್ಯಯನ ಮಾಡಿ ಉತ್ತಮ ಸಾಧನೆ ಮಾಡಿದಾಗ ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ನೆಮ್ಮದಿ ಜೀವನ ನಡೆಸಬಹುದು ಎಂದರು.

ತುಮಕೂರು ವಿವಿ ಕುಲಸಚಿವ (ಮೌಲ್ಯಮಾಪನ) ಡಾ.ಕೆ.ಪ್ರಸನ್ನ ಕುಮಾರ್ ಮಾತನಾಡಿ, ಜಗತ್ತಿನಲ್ಲೆ ಅತ್ಯಂತ ಹೆಚ್ಚು ಯುವ ಜನತೆ ಹೊಂದಿರುವ ರಾಷ್ಟ್ರ ಭಾರತ, ಯುವ ಜನಾಂಗಕ್ಕೆ ಉನ್ನತ ಶಿಕ್ಷಣ ನೀಡಲು ಸರ್ಕಾರ ಕೊಟ್ಯಾಂತರ ರೂ. ವ್ಯಯ ಮಾಡುತ್ತಿದೆ, ಯುವ ವಿದ್ಯಾರ್ಥಿಗಳು ಇದರ ಸದಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು, ಉನ್ನತ ಶಿಕ್ಷಣ ಕೇವಲ ನಾಲ್ಕುಗೋಡೆ ಮಧ್ಯದಲ್ಲಿ ಇರದೆ ಸಮಗ್ರವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ವ್ಯಕ್ತಿತ್ವ ರೂಪಿಸಲು ಎನ್ ಎಸ್ ಎಸ್ ಸೇರಿದಂತೆ ಇತರೆ ಚಟುವಟಿಕೆ ರೂಪಿಸಲಾಗಿದೆ, ವಿದ್ಯಾರ್ಥಿಯು ಶಿಕ್ಷಣದ ಜೊತೆ ವ್ಯಕ್ತಿತ್ವ ರೂಪಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡು ಪರಿಪೂರ್ಣರಾಗಬೇಕು, 21ನೇ ಶತಮಾನದ ಎಲ್ಲಾ ರಂಗದಲ್ಲೂ ಅಪ್ರತಿಮ ಬೆಳವಣಿಗೆಗಳಾಗುತ್ತಿವೆ, ಈ ಜಾಗತಿಕ ಬೆಳವಣಿಗೆಗಳು ಒಡ್ಡುವ ಸವಾಲು, ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ, ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳಿಂದಾಗಿ ಯುವ ಜನತೆಯಲ್ಲಿ ನೈತಿಕ ಮೌಲ್ಯ ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಸಂಶೋಧಕ, ಅಂತಾ ರಾಷ್ಟ್ರೀಯ ಜನಪದ ಗಾಯಕ ಅಮ್ಮರಾಮಚಂದ್ರ, ವಿದ್ಯಾರ್ಥಿ ಅಂಕಪಟ್ಟಿಯಲ್ಲಿ ಫೇಲ್ ಆಗಬಹದು, ಆದರೆ ನಿಜ ಜೀವನದಲ್ಲಿ ಫೇಲ್ ಆಗಲಾರ, ಸತತ ಸಾಧನೆಯಿಂದ ಅಸಾಧ್ಯವಾದದುನ್ನು ಸಾಧ್ಯವಾಗಿಸಬೇಕು, ವಿದ್ಯಾರ್ಥಿಗಳು ತುಳಿದು ಬಾಳುವುದಕ್ಕಿಂತ ತಿಳಿದು ಬಾಳುವ ಬಗ್ಗೆ ಗಮನಹರಿಸಬೇಕು, ಪೋಷಕರ ಶ್ರಮದ ಅರಿವಿನ ಜೊತೆಯಲ್ಲಿ ಪೋಷಕರಿಗೆ ಗೌರನೀಡುವುದ ಮರೆಯಬಾರದು ಎಂದರು.

ಪ್ರಾಚಾರ್ಯೆ ಮಾಯ ಸಾರಂಗಪಾಣಿ ಅಧ್ಯಕ್ಷತೆ ವಹಿಸಿದ್ದು, ಸಿಡಿಸಿ ಸಮಿತಿ ಸದಸ್ಯ ಲೋಹಿತ್, ಸಂಚಾಲಕ ಈಶ್ವರಪ್ಪ, ಸಹ ಪ್ರಾಧ್ಯಾಪಕ ನಾರಾಯಣ, ವ್ಯವಸ್ಥಾಪಕ ಚಲುವಮೂರ್ತಿ ಇತರರು ಇದ್ದು, ಕಾಲೇಜಿನಿಂದ ವರ್ಗಾವಾಗಿದ್ದ ಪ್ರಾಧ್ಯಾಪಕರಾದ ಡಾ.ಗೋವಿಂದರಾಯ, ಪ್ರೊ.ಮೈಲಾರಯ್ಯ, ಡಾ.ಲಕ್ಷ್ಮೀನರಸಮ್ಮ, ಪ್ರೊ.ಹನುಮಂತಪ್ಪ, ಡಾ.ಗಿರಿಜಾಂಬ, ಡಾ.ರವೀಶ, ಪ್ರೊ.ರುಕ್ಮಿಣಿ, ಪ್ರೊ.ನಾರಾಯಣ ದಾಸ್, ವಿಶ್ವೇಶ್ವರಯ್ಯ ಇತರರನ್ನು ಸನ್ಮಾನಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!