ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು: ಸೊಗಡು

ಕೋವಿಡ್ ಹೆಸರಲ್ಲಿ ಭ್ರಷ್ಟಾಚಾರ ಹೆಚ್ಚಿದೆ

533

Get real time updates directly on you device, subscribe now.

ತುಮಕೂರು: ಕೋವಿಡ್ ನೆಪದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ರಾಜಕೀಯ ಬಿಟ್ಟು ಪರಿಸ್ಥಿತಿ ಸುಧಾರಿಸಬೇಕಿದೆ, ಅಧಿಕಾರಿಗಳು ದುಡ್ಡು ಕೊಟ್ಟು ಬಂದಿದ್ದೀವಿ ಹೋಗಿ ಎನ್ನುತ್ತಾರೆ, ಹೀಗಾದರೆ ಜನರ ಕ್ಷೇಮ ನೋಡುವವರು ಯಾರು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೈಗೆ ಸಿಗುವುದಿಲ್ಲ, ಶಾಸಕರು, ಸಂಸದರು, ಸಚಿವರ ಶಿಾರಸ್ಸಿನ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆಯೇ ವಿನಃ ಸಾರ್ವಜನಿಕರ ಹಿತದೃಷ್ಟಿಯಿಂದಲ್ಲ, ಇಂತಹ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲೆಯಲ್ಲಿ ಕೃತಕ ಆಮ್ಲಜನಕದ ಅಭಾವ ಸೃಷ್ಟಿಸಲಾಗುತ್ತಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಆಮ್ಲಜನಕದ ಸಿಲಿಂಡರ್ನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಕೋವಿಡ್ ರೋಗಿಗಳಿಗೆ ಇರುವ ವೆಂಟಿಲೇಟರ್ ಹಾಸಿಗೆಗಳು ಸಾಕಾಗುವುದಿಲ್ಲ ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಹೇಳಿದರು ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಡಬಲ್ ರೇಟ್ಗೆ ಆಮ್ಲಜನಕ ಮಾರುತ್ತಿರುವವರ ವಿರುದ್ಧ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಕೋವಿಡ್ಗೆ ತುತ್ತಾದವರಿಗಾಗಿ ಹೊಟೇಲ್ ಬಿಟ್ಟುಕೊಡುವುದಾಗಿ ತಿಳಿಸಿದ ಅವರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸುವಂತೆ ಆಗ್ರಹಿಸಿದರು.
ತುಮಕೂರು ನಗರದಲ್ಲಿರುವ ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಆರೋಗ್ಯ ಇಲಾಖೆ ಪಿಪಿಇ ಕಿಟ್ ನೀಡಿಲ್ಲ, ಇದರಿಂದಾಗಿ ಆತಂಕದಲ್ಲಿಯೇ ಅಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ, ಎಲೆಕ್ಟ್ರಿಕ್ ಚಿತಾಗಾರದಲ್ಲಿ ಪ್ರಕರಣದಿಂದ ಸಾವನ್ನಪ್ಪಿದವರ ದಹನ ಮಾಡಲಾಗುತ್ತಿದ್ದು, ಕೋವಿಡ್ನಿಂದ ಸಾವನ್ನಪ್ಪಿದವರನ್ನು ದಫನ್ ಮಾಡುವವರಿಗೆ ಪಿಪಿಇ ಕಿಟ್ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು.
ಕೋವಿಡ್ 2ನೇ ಅಲೆ ಹೆಚ್ಚಳವಾಗುತ್ತಿದ್ದು, ಕ್ವಾರಂಟೈನ್ ಆಗಿರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಪಾಲಿಕೆ ಸಿಬ್ಬಂದಿ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ, ಪಡಿತರವನ್ನು ನೀಡದೇ ಇದ್ದರೆ ಹೇಗೆ? ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಕ್ವಾರಂಟೈನ್ಗೆ ಒಳಗಾಗಿರುವವರಿಗೆ ಅಗತ್ಯ ವಸ್ತುಗಳನ್ನು ನೀಡಲು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದರು.
ವಿದ್ಯಾವಂತರು ನಾಗರಿಕರಿಗೆ ಮಾರ್ಗದರ್ಶನ ಮಾಡಬೇಕು, ಕೋವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಕೋವಿಡ್ಗೆ ಹೆದರದೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು, ಜನರಲ್ಲಿ ಅರಿವು ಮೂಡಿಸುವ ಮೂಲಕ ಸ್ವಯಂ ನಿಯಂತ್ರಣ ಸ್ಥಿತಿ ಸೃಷ್ಟಿಸದೆ ಹೋದರೆ ಕೋವಿಡ್ ನಿಯಂತ್ರಿಸಲು ಕಷ್ಟವಾಗಲಿದೆ ಎಂದರು.
ಮಧುಗಿರಿ ಬಿಜೆಪಿ ಮಂಡಲ ಅಧ್ಯಕ್ಷ ಮೂರ್ತಿ ಮಾತನಾಡಿ, ಮಧುಗಿರಿ ತಾಲ್ಲೂಕಿನ ತಾಡಿ ಗ್ರಾಮದಲ್ಲಿ ಜಾತ್ರೆ ಸಮಯದಲ್ಲಿ ಉಂಟಾದ ಸಣ್ಣ ಸಮಸ್ಯೆಯಿಂದ ಹೊಡೆದಾಟವಾಗಿದ್ದು, ಅಲ್ಲಿನ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಂಡು ನಿರಾಪರಾಧಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದಾರೆ, ನಮ್ಮದೆ ಸರ್ಕಾರವಿದ್ದರೂ ನಮ್ಮ ಕಾರ್ಯಕರ್ತನಿಗೆ ನ್ಯಾಯ ಸಿಗದೆ ಇದ್ದರೆ ಹೇಗೆ? ಏಕಪಕ್ಷೀಯವಾಗಿ ದುವರ್ತನೆ ತೋರಿರುವ ಡಿವೈಎಸ್ಪಿ, ಸಬ್ಇನ್ಸ್ಪೆಕ್ಟರ್ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಪ್ರಕರಣದ ವಿಚಾರಣೆಗಾಗಿ ತೆರಳಿದ್ದ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಅವರು, ಎಲ್ಲರ ಸಮ್ಮುಖದಲ್ಲಿಯೇ ಹೆಣ್ಣು ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ, ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡುತ್ತೇವೆ ಎಂದ ಅವರು, ಕೋವಿಡ್ ಇಲ್ಲದೇ ಹೋಗಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ಅರಾಜಕತೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು ಎಂದು ಹೇಳಿದರು.
ಸಂತ್ರಸ್ಥೆ ದಾಳಮ್ಮ ಮಾತನಾಡಿ ದೇವಸ್ಥಾನದ ವಿಚಾರದಲ್ಲಿ ಹಣ ನೀಡಲಿಲ್ಲ ಎಂದು ನನ್ನ ಗಂಡನ ಮೇಲೆ ಹಲ್ಲೆ ಮಾಡಿದರು, ಗರ್ಭಿಣಿ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ, ಬೀದಿಯಲ್ಲಿ ನಿಲ್ಲಿಸಿ ಅವಾಚ್ಯವಾಗಿ ನಿಂದಿಸುತ್ತಾರೆ, ನನ್ನ ಮಗನನ್ನು ಕೊಲೆ ಮಾಡಲು ಚಿತಾವಣೆ ಮಾಡಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸದಾಶಿವಯ್ಯ, ಚಂದ್ರಶೇಖರ್ ಇತರರಿದ್ದರು.

ಹಿಂದೂ ಹೆಣ್ಣು ಮಕ್ಕಳ ಟಾರ್ಗೆಟ್
ಹಿಂದೂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ, 70 ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ, ಹಿಂದೂ ಹುಡುಗರು ಷಂಡರಾ? ಮುಸ್ಲಿಂ ಪೊಲೀಸರು ಮೂರು ಮದುವೆಯಾಗಿದ್ದಾರೆ, ವೀಡಿಯೋ ಮಾರ್ಫಿಂಗ್ ಮಾಡಿ ಅಶ್ಲೀಲ ವೀಡಿಯೋ ಸೃಷ್ಟಿಸಲಾಗುತ್ತಿದೆ, ಸೈಬರ್ ಕ್ರೈಂಗೆ ದೂರು ನೀಡಿದರು ಕ್ರಮ ಕೈಗೊಳ್ಳುತ್ತಿಲ್ಲ, ಸಲ್ಮಾನ್ ಖಾನ್ ಹೆಸರಿನಲ್ಲಿ ಸಂಘ ಇದ್ಯೆಯಂತೆ, ಅದರಲ್ಲಿ ಹುಡುಗರು ಇದೆಲ್ಲ ಮಾಡುತ್ತಿದ್ದಾರೆ, ಮುಸ್ಲಿಂರನ್ನು ಅಸಹ್ಯವಾಗಿ ನಡೆಸಿಕೊಂಡಿಲ್ಲ, ಇನ್ನತ್ತು ವರ್ಷದಲ್ಲಿ ಪಾಕಿಸ್ತಾನ ಕೇಳುವುದಿಲ್ಲ, ನಮ್ಮನ್ನೇ ಬುರ್ಕಾ ಹಾಕಿಸಿಕೊಳ್ಳುತ್ತೀರಾ? ಮುಂಜಿ ಮಾಡಿಸಿಕೊಳ್ಳುತ್ತೀರಾ ಎಂದು ಕೇಳುತ್ತಾರೆ?
ಸೊಗಡು ಶಿವಣ್ಣ, ಮಾಜಿ ಸಚಿವ

ಲವ್ ಜಿಹಾದ್ಗೆ ಕಡಿವಾಣ ಹಾಕಿ
ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚುತ್ತಿವೆ, ವಾರದಲ್ಲಿಯೇ ಮೂರು ಪ್ರಕರಣ ನಡೆದಿದ್ದರು, ಪೊಲೀಸರು ಪ್ರಕರಣ ದಾಖಲಿಸುತ್ತಿಲ್ಲ, ಹಿಂದೂ ಹೆಣ್ಣು ಮಕ್ಕಳು ದಾರಿ ತಪ್ಪಬಾರದು, ಲವ್ ಜಿಹಾದ್ ಪ್ರೇಮ ಪ್ರಕರಣವಲ್ಲ, 18-20 ವರ್ಷದ ಅಪ್ರಾಪ್ತ ಹುಡುಗಿಯರ ತಲೆ ಕೆಡಿಸಿ ಮದುವೆ ಮಾಡಿಕೊಳ್ಳಲಾಗುತ್ತಿದೆ.
-ಚಂದ್ರಶೇಖರ್, ಬಿಜೆಪಿ ಉಪಾಧ್ಯಕ್ಷ.

Get real time updates directly on you device, subscribe now.

Comments are closed.

error: Content is protected !!