ಗುಬ್ಬಿ: ಹಾಸ್ಯ ಬ್ರಹ್ಮ ನರಸಿಂಹರಾಜು ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಡಾ.ಗುಬ್ಬಿ ವೀರಣ್ಣ ರಂಗಮಂದಿರ ಗುಬ್ಬಿಯಲ್ಲಿ ನಾಟಕೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಉಗಮ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ತಿಪಟೂರಿನವರಾದ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಬೇಕೆಂದು ನಿರ್ಧರಿಸಿ ಗುಬ್ಬಿ ಪಟ್ಟಣದಲ್ಲಿ ಗುಬ್ಬಿ ವೀರಣ್ಣ ಟ್ರಸ್ಟ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ವಿಶೇಷ ಕಾರ್ಯಕ್ರಮ ಆ ಯೋಜನೆ ಮಾಡಿದ್ದು, ಇದರ ಅಂಗವಾಗಿ ಡಿ.25 ರಿಂದ 29 ರ ವರೆಗೆ 5 ನಾಟಕ ಪ್ರಸ್ತುತ ಪಡಿಸಲಾಗುತ್ತಿದೆ, ಚಾರು ವಸಂತ, ಬ್ಲಾಕ್ ಔಟ್, ಸೋತು ಕೆಟ್ಟ ಸಾದ್ವಿ, ಗೌಡ ಮೆಚ್ಚಿದ ಹುಡುಗಿ, ತಾಜ್ ಮಹಲ್ ಟೆಂಡರ್ ನಾಟಕಗಳು ಪ್ರಸ್ತುತ ಪಡಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.
ಹರಿಕಥ ವಿದ್ವಾಂಸ ಡಾ.ಲಕ್ಷ್ಮಣ ದಾಸ್ ಮಾತನಾಡಿ, ಗುಬ್ಬಿ ಕಂಪನಿಯಲ್ಲಿ ನರಸಿಂಹರಾಜು, ಡಾ.ರಾಜಕುಮಾರ್, ಬಾಲಕೃಷ್ಣ ಅಯ್ಯರ್ ಅಂತಹ ನೂರಾರು ಕಲಾವಿದರು ಗುಬ್ಬಿ ಕಂಪನಿಯಲ್ಲಿ ನಾಟಕಗಳನ್ನು ಕಲಿತುಕೊಂಡು ರಾಜ್ಯಕ್ಕೆ ರಂಗಭೂಮಿಗೆ ಚಿತ್ರಕ್ಕೆ ಭದ್ರಬುನಾದಿ ಹಾಕಿಕೊಟ್ಟವರು ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮ ನಾಟಕಗಳನ್ನ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ರಾಜೇಶ್ ಗುಬ್ಬಿ ಮಾತನಾಡಿ, ಡಿ.25 ಬುಧವಾರ ಸಂಜೆ 5 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಚಿವ ವಿ.ಸೋಮಣ್ಣ, ಶಾಸಕ ಎಸ್.ಆರ್.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಂಗಳ ರಾಜಣ್ಣ, ಉಪಾಧ್ಯಕ್ಷ ಮಮತಾ ಶಿವಪ್ಪ, ಸದಸ್ಯ ಕೃಷ್ಣಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ, ಕಲಾವಿದ ಸುಧಾ ನರಸಿಂಹರಾಜು ಸೇರಿದಂತೆ ಇನ್ನಿತರರು ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಅಂದು ಮೆರವಣಿಗೆ ಮೂಲಕ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಗುತ್ತದೆ, ಕಲಾ ಅಭಿಮಾನಿಗಳು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಬನ್ನಿ ಎಂದು ತಿಳಿಸಿದರು.
Comments are closed.