ಡಿ.26 ರಿಂದ ರಂಭಾಪುರಿ ಜಗದ್ಗುರ ಇಷ್ಟಲಿಂಗ ಪೂಜೆ

2

Get real time updates directly on you device, subscribe now.


ತುಮಕೂರು: ಶ್ರೀಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ನಿಂದ ನಗರದಲ್ಲಿ ನಾಲ್ಕು ದಿನಗಳ ಕಾಲ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಈ ತಿಂಗಳ 26ರಿಂದ 29ರ ವರೆಗೆ ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಸಿದ್ಧರಬೆಟ್ಟ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ 5.30ಕ್ಕೆ ಧನುರ್ಮಾಸದ ಇಷ್ಟಲಿಂಗಪೂಜೆ ನೆರವೇರಿಸುವರು, ಅವರ ಸಾನಿಧ್ಯದಲ್ಲಿ ಸಂಜೆ 6.30ಕ್ಕೆ ಜನ ಜಾಗೃತಿ ಧರ್ಮ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಟ್ರಸ್ಟ್ ನ ಕಾರ್ಯದರ್ಶಿ ಭಸ್ಮಾಂಗಿ ರುದ್ರಯ್ಯ, ಸಹಕಾರ್ಯದರ್ಶಿ ಜಿ.ಎಸ್.ಸಿದ್ಧರಾಜು, ಮುಖಂಡರಾದ ಜಿ.ಸಿ.ವಿರೂಪಾಕ್ಷ, ಪ್ರಭು ಆರ್.ಎಸ್, ವೈ.ಕೆ.ಜ್ಯೋತಿ, ವಿಜಯಕುಮಾರ್, ಓಂಕಾರಸ್ವಾಮಿ, ಟಿ.ಎಸ್.ಹರೀಶ್, ನಟರಾಜು, ರೇಣುಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!