ಕುಣಿಗಲ್: ರೈಲ್ವೆ ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದಾಗಿ ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಕುಣಿಗಲ್ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿದ್ದಾರೆ.
ಮಧ್ಯಾಹ್ನ ಬೆಂಗಳೂರಿನಿಂದ ಕುಣಿಗಲ್ ಮೂಲಕ ಹಾಸನಕ್ಕೆ ತೆರಳುವ ಡೆಮೋ ರೈಲಿನಲ್ಲಿ ಕುಣಿಗಲ್ ಪಟ್ಟಣದಲ್ಲಿ ಹತ್ತಿದ ವ್ಯಕ್ತಿ ಹಾಸನಕ್ಕೆ ತೆರಳುತ್ತಿದ್ದು ರೈಲು ಕುಣಿಗಲ್ ನಿಲ್ದಾಣ ಬಿಟ್ಟು ಕೆಲವೆ ದೂರ ಕ್ರಮಿಸುವಲ್ಲಿ ಪ್ರಯಾಣಿಕನೋರ್ವ ಸೀಟಿನಿಂದ ಎದ್ದು ಹೋದವ ಬಾರಲಿಲ್ಲ, ಇದನ್ನು ಗಮನಿಸಿದ ಸಹ ಪ್ರಯಾಣಿಕ ಬೋಗಿಯಲ್ಲಿ ನೋಡಿದರೂ ಆತ ಸಿಗದ ಕಾರಣ ಆತನ ಬ್ಯಾಗಿನಲ್ಲಿದ್ದ ಆಧಾರ್ ಕಾರ್ಡ್ನ ಗಮನಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ, ಈ ಬಗ್ಗೆ ಮಾಹಿತಿ ಪಡೆದ ಕುಣಿಗಲ್ ಪೊಲೀಸರು ಕುಣಿಗಲ್ ರೈಲು ನಿಲ್ದಾಣ ದಿಂದ ಹಾಸನ ಕಡೆಯ ರೈಲ್ವೆ ಹಳಿಯ ಎರಡೂ ಬದಿ ಪರಿಶೀಲನೆ ನಡೆಸುತ್ತಾ ಬಂದಾಗ ಪಟ್ಟಣದಿಂದ ಸುಮಾರು ಆರು ಕಿ.ಮೀ ದೂರದಲ್ಲಿನ ನಾಗೇಗೌಡನ ಪಾಳ್ಯ- ಅಲಪ್ಪನ ಗುಡ್ಡೆ ಮಧ್ಯಭಾಗದಲ್ಲಿ ವ್ಯಕ್ತಿಯೊಬ್ಬ ಮೂವತ್ತು ಅಡಿ ಆಳದಲ್ಲಿ ಹಳಿಯ ಪಕ್ಕದಲ್ಲಿ ಬಿದ್ದಿರುವುದು ಪತ್ತೆಹಚ್ಚಿ, ಕಾಲು ಮುರಿದು, ತಲೆಗೆ ತೀವ್ರ ಪೆಟ್ಟಾದ ಆತನನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಳ್ಳೂರು ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಿದ್ದಾರೆ, ಗಾಯಾಳುವನ್ನು ತಾಲೂಕಿನ ಅಮೃತೂರು ವಾಸಿ ಅಶೋಕ್ ಎಂದು ಗುರುತಿಸಲಾಗಿದೆ.
Get real time updates directly on you device, subscribe now.
Prev Post
Next Post
Comments are closed.