ಕುಣಿಗಲ್: ಪಟ್ಟಣದ ಸರ್ಕಾರಿ ಕೈಗಾರಿಕೆ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಇಲ್ಲದಿರುವುದನ್ನು ಖಂಡಿಸಿರುವ ನಿಖಿಲ್ ಸೇವಾ ಸಮಿತಿ ಪದಾಧಿಕಾರಿಗಳು ಇನ್ನೊಂದು ವಾರದೊಳಗೆ ಅಗತ್ಯ ಸೌಲಭ್ಯ ಕಲ್ಪಿಸದೆ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ವಿವರಿಸಿರುವ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಕಪನಿಪಾಳ್ಯ ನಿಖಿಲ್, ಸರ್ಕಾರಿ ಕೈಗಾರಿಕೆ ತರಬೇತಿ ಕಾಲೇಜು ಪಟ್ಟಣದಿಂದ ಹೊರಗಡೆ ಇದ್ದು, ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ಕಾಲೇಜು ಇರುವ ಬಗ್ಗೆ ಮಾಹಿತಿ ಇಲ್ಲದಂತಾಗಿದೆ, ಕಾಲೇಜಿನಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ಬರುತ್ತಿದ್ದು, ಕಾಲೇಜಿಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇಲ್ಲ, ವಿದ್ಯಾರ್ಥಿಗಳ ಶೌಚಾಲಯಕ್ಕೆ ಸ್ವಚ್ಛತೆ ಮಾಡುವವರಿಲ್ಲ ಎಂಬ ಕುಂಟು ನೆಪ ನೀಡಿ ಬೀಗ ಹಾಕಿದ್ದು, ವಿದ್ಯಾರ್ಥಿಗಳು ಪ್ರಕೃತಿ ಕರೆ ತೀರಿಸಿಕೊಳ್ಳಲು ಅಕ್ಕಪಕ್ಕದ ಕರಿಕಲ್ಲು ಗುಡ್ಡವನ್ನೆ ಆಶ್ರಯಿಸಬೇಕಿದೆ.
ನಿರ್ಜನ ಪ್ರದೇಶವಾದ ಕಾರಣ ಚಿರತೆ ಸೇರಿದಂತೆ ಇತರೆ ಕೀಟಗಳ ಹಾವಳಿ ಇರುತ್ತದೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದ್ದು ಪ್ರಾಚಾರ್ಯರ ಕೊಠಡಿಯಲ್ಲಿರುವ ಹತ್ತುಲೀಟರ್ ಸಾಮರ್ಥ್ಯದ ಕುಡಿಯುವ ನೀರು 300 ವಿದ್ಯಾರ್ಥಿಗಳಿಗೆ ಸಾಲುವುದಿಲ್ಲ, ಈ ಬಗ್ಗೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಿಗೆ ಸಮಸ್ಯೆ ಬಗ್ಗೆ ಕೇಳಿದರೆ ಅನುದಾನ ಕೊರತೆ ಎಂಬ ಕುಂಟು ನೆಪ ಹೇಳುತ್ತಾರೆ, ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಸಮಿತಿ ವತಿಯಿಂದ ಸಮರ್ಪಕ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರಭಾರ ಪ್ರಾಚಾರ್ಯ ನರಿಸಿಂಹಮೂರ್ತಿಯವರಿಗೆ ಮನವಿ ನೀಡಿದ್ದಾರೆ.
ಪದಾಧಿಕಾರಿಗಳಾದ ಅರುಣ, ಗಗನ, ಕಿರಣ, ನಂಜೇಗೌಡ ಇತರರು ಇದ್ದರು.
Comments are closed.