ತುಮಕೂರು: ವಿದ್ಯಾರ್ಥಿಗಳು ಕೌಶಲ್ಯವನ್ನು ಹೆಚ್ಚಿಸಿಕೊಂಡು ದೊರೆತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಾಹೇ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಕೆ.ಬಿ.ಲಿಂಗೇಗೌಡ ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಪಿಜಿ ಸೆಮಿನಾರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಹೇ ವಿಶ್ವ ವಿದ್ಯಾಲಯದ ಎಂಬಿಎ ವಿಭಾಗದ ಪ್ರಥಮ ಬ್ಯಾಚ್ ನ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಕೌಶಲ್ಯ ಕಲಿಯುವ ಅನಿವಾರ್ಯತೆ ಇದೆ, ಕೌಶಲ್ಯ ಬೆಳೆಸಿಕೊಂಡು ಧೈರ್ಯದಿಂದ ಮುನ್ನುಗ್ಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಹೇ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಎಂ.ಝಡ್.ಕುರಿಯನ್ ಮಾತನಾಡಿ, ನಿಮ್ಮ ಯಶಸ್ಸಿಗೆ ನೀವೆ ಕಾರಣ ಹಾಗಾಗಿ ಯಶಸ್ಸಿನ ಕಡೆ ಮುನ್ನುಗ್ಗಿ, ಬಂದ ಅವಕಾಶ ಬಿಟ್ಟು ಮತ್ತೊಂದು ಅವಕಾಶಕ್ಕೆ ಕಾಯಬೇಡಿ, ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡು ಉದ್ಯಮ ಸೃಷ್ಟಿಸುವ ಕಡೆ ಗಮನಹರಿಸಿ ಎಂದು ಹೇಳಿದರು.
ಎಸ್ ಎಸ್ ಐ ಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ಪ್ರಸಕ್ತ ಸಂದರ್ಭದಲ್ಲಿ ಬೇಡಿಕೆ ಇರುವ ಎಂಬಿಎ ಕೋರ್ಸ್ಗೆ ಬೇಕಾದ ಎಲ್ಲಾ ಸೌಲಭ್ಯ ನೀಡಲಾಗಿದೆ, ಇದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹೇ ವಿಶ್ವ ವಿದ್ಯಾಲಯ ಪರಿಕ್ಷಾಂಗ ಕುಲಸಚಿವ ಡಾ.ಗುರುಶಂಕರ್.ಜಿ, ಉದ್ಯೋಗ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥ ಡಾ.ಅಶೋಕ್ ಮೆಹ್ತ, ಅಕಾಡೆಮಿ ಡೀನ್ ಡಾ.ರೇಣುಕಲತಾ.ಎಸ್, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ರೂಪ.ಎಂ.ಸಿ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
Comments are closed.