ಕುಣಿಗಲ್: ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಆರೋಪಿಸಿ ತಾಯಿ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಅಮೃತೂರು ಹೋಬಳಿಯ ಗ್ರಾಮ ಒಂದರಲ್ಲಿ ವಾಸವಾಗಿರುವ ಕುಟುಂಬದಲ್ಲಿ ಘಟನೆ ನಡೆದಿದ್ದು, ತಾಯಿ, ಕಾರ್ಯ ನಿಮಿತ್ತ ಹೊರ ಬಂದಿದ್ದಾಗ ಮನೆಯಲ್ಲಿ ತಂದೆ ಹಾಗೂ ಅಪ್ರಾಪ್ತ ಮಗಳು ಇದ್ದರು ಎನ್ನಲಾಗಿದೆ, ತಾಯಿ ಕೆಲಸ ಮುಗಿಸಿ ಪುನಃ ಮನೆಗೆ ಬಂದಾಗ ಮಗಳು ಅಳುತ್ತಿದ್ದು, ಅಳುವಿಗೆ ಕಾರಣ ಕೇಳಿದಾಗ ತಂದೆಯಿಂದ ಕೃತ್ಯ ನಡೆಸಿದ್ದಾರೆಂದು ಎಂದು ಅಪ್ರಾಪ್ತೆ ತಿಳಿಸಿದ ಹಿನ್ನೆಲೆಯಲ್ಲಿ ತಾಯಿ ತನ್ನ ಪತಿ ಮೇಲೆ ಅಮೃತೂರು ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.