ಕುಣಿಗಲ್: ಪಟ್ಟಣದ ಸಿಎಸ್ ಐ ಕ್ರಿಸ್ತ ಕೃಪಾಲಯ ದೇವಾಲಯದಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಸಡಗರ ಸಂಭ್ರಮದಿಂದ ಹಮ್ಮಿಕೊಳ್ಳಲಾಯಿತು, ಕ್ರಿಸ್ಮಸ್ ಹಬ್ಬಸಚರಣೆ ಹಿನ್ನೆಲೆಯಲ್ಲಿ ಫಾದರ್ ಪ್ರೊ.ಹೇಮಂತ್ ಜೋಯೆಲ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಸ್ತುತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಹಬ್ಬಾಚರಣೆ ಪ್ರಯುಕ್ತ ಕೇಕ್ ಮಕ್ಕಳಿಗೆ ಸಾರ್ವಜನಿಕರಿಗೆ ವಿತರಿಸಲಾಯಿತು, ಶುಭಾಶೀರ್ವಾದ ನೀಡಿ ಮಾತನಾಡಿದ ಫಾದರ್ ಪ್ರೊ. ಹೇಮಂತ್ ಜೋಯಲ್, ಪಟ್ಟಣ, ರಾಜ್ಯ, ರಾಷ್ಟ್ರದಲ್ಲಿ ಶಾಂತಿ ಸಮೃದ್ಧಿ ನೆಲೆಸಲಿ, ಸಮಸ್ತ ಮಾನವಕುಲದ ಉದ್ಧಾರಕ್ಕಾಗಿ ಯೇಸು ಸ್ವಾಮಿ ಅವತರಿಸಿ ಅಜ್ಞಾನದ ಕತ್ತಲಿನಲ್ಲಿಲ ಮನುಜರನ್ನು ಸುವಿಚಾರ ಮಾನವೀಯ ಮೌಲ್ಯಗಳ ಬೆಳಕಿನೆಡೆಗೆ ದಾರಿ ತೋರಿಸಿ ಎಲ್ಲರೂ ಸಹೋದರ, ಸಹಬಾಳ್ವೆಯಿಂದ ಜೀವನ ನಡೆಸುವಂತೆ ಆಶೀರ್ವದಿಸಿದರು.
ಈ ಶುಭ ಸಂದರ್ಭದಲ್ಲಿ ಎಲ್ಲೆಡೆ ಮಾನವೀಯತೆ ನೆಲೆಗೊಂಡು ಸರ್ವರೂ ಶಾಂತಿ ನೆಮ್ಮದಿಯಿಂದ ಸುಖ ಜೀವನ ನಡೆಸಲಿ ಎಂದರು. ದೇವಾಲಯ ಸಮಿತಿಯ ಪ್ರಮುಖರಾದ ಜೇಮ್ಸ್ ಪೀಟರ್, ಹರ್ಷವರ್ದಿನಿ, ಶಶಿಕಲಾ, ನಿಚ್ಚಲ್, ಲಿಲ್ಲಿ ಮಾರ್ಗರೇಟ್, ಎಲಿಜಬತ್ ಇತರರು ಇದ್ದರು.
Get real time updates directly on you device, subscribe now.
Prev Post
Next Post
Comments are closed.