ತುರುವೇಕೆರೆ: ತಾಲೂಕಿನ ತಾವರೆಕೆರೆ ಗ್ರಾಮದ ರಾಮಕೃಷ್ಣಪ್ಪ ಎಂಬುವವರಿಗೆ ಸೇರಿದ ಕಾಯಿ ಶೆಡ್ಡಿಗೆ ಬೆಂಕಿ ತಗುಲಿ ಶೆಡ್ ನಲ್ಲಿದ್ದ ಸುಮಾರು 18 ಸಾವಿರ ಕೊಬ್ಬರಿ, 12 ಸಾವಿರ ತೆಂಗಿನ ಕಾಯಿ ಸುಟ್ಟು ಭಸ್ಮವಾಗಿದೆ, ಅಲ್ಲದೆ ಶೆಡ್ಡಿನೊಳಗಿದ್ದ ಮಹೇಂದ್ರ ಜಿಯೋ ಎಂಬ ನಾಲ್ಕು ಚಕ್ರದ ನೂತನ ವಾಹನ ಸಹ ಸಂಪೂರ್ಣವಾಗಿ ಭಸ್ಮಗೊಂಡಿದೆ.
ತುರುವೇಕೆರೆ ಮತ್ತು ಚಿಕ್ಕನಾಯಕನ ಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ತಾವರೆಕೆರೆ ಗ್ರಾಮಸ್ಥರ ಸಹಕಾರದಿಂದ ಬೆಂಕಿ ನಂದಿಸಿದರು, ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ, ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಅಗ್ನಿ ಅವಘಡ ಆಕಸ್ಮಿಕವೋ? ಅಥವಾ ಉದ್ದೇಶ ಪೂರ್ವಕವಾಗಿ ಯಾರಾದರೂ ಹಾಕಿದ್ದಾರೋ ಎಂಬುದು ತಿಳಿಯದಾಗಿದೆ, ರೈತ ರಾಮಕೃಷ್ಣ ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮ ಪಂಚಾಯಿತಿಯ ಸದಸ್ಯ ಕೆಂಪೇಗೌಡರು ಒತ್ತಾಯಿಸಿದ್ದಾರೆ.
ತೆಂಗಿನಕಾಯಿ ಶೆಡ್ ಗೆ ಬೆಂಕಿ- ಕೊಬರಿ ಭಸ್ಮ
Get real time updates directly on you device, subscribe now.
Prev Post
Comments are closed.