ತುಮಕೂರು: ನಗರದ ಖಾಸಗಿ ಆಸ್ಪತ್ರೆ ಬಳಿ ಸಿಕ್ಕಿದ್ದ ಮಹಿಳೆಯೊಬ್ಬರ ಬ್ಯಾಗ್ ನ್ನು ಪೊಲೀಸರ ಮುಖಾಂತರ ವಾರಸುದಾರ ಮಹಿಳೆಗೆ ಹಿಂತಿರುಗಿಸುವ ಮೂಲಕ ಆರ್ ಟಿಓ ಇನ್ಸ್ ಪೆಕ್ಟರ್ ಸದ್ರುಲ್ಲಾ ಷರೀಫ್ ಮಾನವೀಯತೆ ಮೆರೆದಿದ್ದಾರೆ.
ನಗರದ ಮಡಿಲು ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಅನಾಮಾಧೇಯ ಬ್ಯಾಗ್ ಬಿದ್ದಿರುವುದನ್ನು ಕಂಡ ಆರ್ ಟಿಓ ಇನ್ಸ್ ಪೆಕ್ಟರ್ ಸದ್ರುಲ್ಲಾ ಷರೀಫ್ ಅವರು ಅನುಮಾನಾಸ್ಪದವಾಗಿ ಆ ಬ್ಯಾಗ್ ನ್ನು ಎತ್ತಿಕೊಂಡು ಅಕ್ಕಪಕ್ಕ ಈ ಬ್ಯಾಗ್ ನ ವಾರಸುದಾರರು ಇದ್ದಾರೆಯೇ ಎಂದು ನೋಡಿದ್ದಾರೆ, ಆದರೆ ಆ ಬ್ಯಾಗ್ ವಾರಸುದಾರರು ಯಾರೂ ಪತ್ತೆಯಾಗದ ಕಾರಣ ತಕ್ಷಣ ಸಮೀಪದಲ್ಲೇ ಇದ್ದ ಹೊಸಬಡಾವಣೆ ಪೊಲೀಸ್ ಠಾಣೆಗೆ ತೆರಳಿ ತಮಗೆ ದೊರೆತ ಬ್ಯಾಗ್ ನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ನಂತರ ಕಾರ್ಯಪ್ರವೃತ್ತರಾದ ಹೊಸಬಡಾವಣೆ ಠಾಣೆ ಪೊಲೀಸರು ಬ್ಯಾಗ್ ನಲ್ಲಿದ್ದ ಕೆಲ ಚೀಟಿಯ ಮಾಹಿತಿ ಮೇರೆಗೆ ಮಡಿಲು ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಗೆ ತೆರಳಿ ವಾರಸುದಾರರ ಪತ್ತೆಗಾಗಿ ಹುಡುಕಾಡಿದ್ದಾರೆ, ನಂತರ ಆಸ್ಪತ್ರೆ ಸಿಬ್ಬಂದಿ ಮೂಲಕ ವಾರಸುದಾರರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿ ಅವರನ್ನು ಪೊಲೀಸ್ ಠಾಣೆಗೆ ಕರೆ ಬ್ಯಾಗ್ ಹಿಂತಿರುಗಿಸಿದ್ದಾರೆ.
ಬ್ಯಾಗ್ ಕಳೆದುಕೊಂಡಿದ್ದ ನಗರದ ಉಪ್ಪಾರಹಳ್ಳಿಯ ನೇತ್ರಾವತಿ ಅವರು ತಮ್ಮ ಬ್ಯಾಗ್ ಹಿಂತಿರುಗಿಸಿದ ಆರ್ ಟಿಓ ಇನ್ಸ್ ಪೆಕ್ಟರ್ ಸದ್ರುಲ್ಲಾ ಷರೀಪ್ ಹಾಗೂ ಹೊಸ ಬಡಾವಣೆ ಠಾಣೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬ್ಯಾಗ್ ನಲ್ಲಿ 8 ಸಾವಿರ ರೂ. ನಗದು, ಒಂದು ಮೊಬೈಲ್, ಮನೆಯ ಲಾಕರ್ ಕೀ, ಬೀರುವಿನ ಕೀ ಸೇರಿದಂತೆ ಇತರೆ ವಸ್ತುಗಳು ಇದ್ದವು ಎಂದು ತಿಳಿದು ಬಂದಿದೆ.
Comments are closed.