ಚರ್ಚ್ಗಳಲ್ಲಿ ಏಸು ಧ್ಯಾನ, ಪ್ರಾರ್ಥನೆ ಸಲ್ಲಿಕೆ

ಎಲ್ಲಡೆ ಸಂಭ್ರಮ, ಸಡಗರದಿಂದ ಕ್ರಿಸ್ ಮಸ್ ಆಚರಣೆ

3

Get real time updates directly on you device, subscribe now.


ತುಮಕೂರು: ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್ ಮಸ್ ಹಬ್ಬವನ್ನು ನಗರ ಸೇರಿದತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಚರ್ಚ್ ಸರ್ಕಲ್ ನಲ್ಲಿರುವ ಸಿಎಸ್ ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ಸಿಎಸ್ಐ ಲೇಔಟ್ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾ ಗೇಟ್ನಲ್ಲಿರುವ ಟಾಮ್ಲಿಸನ್ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ಗಳಲ್ಲಿ ಕ್ರೈಸ್ತ ಬಾಂಧವರು ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಪ್ರಯುಕ್ತ ನಗರದಲ್ಲಿರುವ 7 ಸಿಎಸ್ ಐ ಚರ್ಚ್, ಎರಡು ರೋಮನ್ ಕ್ಯಾಥೋಲಿಕ್ ಚರ್ಚ್, ಒಂದು ಮಾರ್ಥಾಂಬ ಚರ್ಚ್ ಒಂದು ಫೆದರಲ್ ಚರ್ಚ್, 15 ಇಂಡಿಪೆಂಡೆಂಟ್ ಚರ್ಚ್ಗಳು ಸೇರಿದಂತೆ ಎಲ್ಲಾ ಚರ್ಚ್ಗಳಲ್ಲಿ ವಿಶೇಷವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು, ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು.

ತುಮಕೂರು ಕ್ಷೇತ್ರದ ಉಪಾಧ್ಯಕ್ಷ ಗಣಸುಧೀರ್ ಮಾತನಾಡಿ, ತುಮಕೂರು ಕ್ಷೇತ್ರಕ್ಕೆ ಒಳಪಡುವ ತುಮಕೂರು ನಗರ, ಗುಬ್ಬಿ, ಕುಣಿಗಲ್, ತಿಪಟೂರು, ಗೌರಿಬಿದನೂರು, ಚಿಕ್ಕಬಳ್ಳಾಪುರದ ಸರ್ವರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿ, ಕ್ರಿಸ್ ಮಸ್ ಹಬ್ಬ ಜಗತ್ತಿನ ಬಹುತೇಕ ಜನರು ಸಂಭ್ರಮದಿಂದ ಆಚರಿಸುವ ಜಾಗತಿಕ ಹಬ್ಬ, ಈ ಹಬ್ಬ ಯಾವುದೇ ಸಂಪ್ರದಾಯ, ಆಚರಣೆಯಲ್ಲ, ಈ ಹಬ್ಬದ ಪ್ರಧಾನ ವ್ಯಕ್ತಿ ಏಸುಕ್ರಿಸ್ತ, ಆತನ ಜನನ ಮಹತ್ವ ಅಡಗಿರುವುದು ಜನರೊಂದಿಗೆ ಆತ ಬೆರೆತು ಬಾಳ್ವೆ ಮಾಡಿರುವುದರಲ್ಲಿ, ಜನರಿಗಾಗಿ ತ್ಯಾಗ ಮಾಡಿರುವ ಆತನ ಆಚರಣೆಯೇ ಈ ಹಬ್ಬದ ಸಂಕೇತ ಎಂದರು.

Get real time updates directly on you device, subscribe now.

Comments are closed.

error: Content is protected !!