ಸಿಂಗ್ ಭೇಟಿ ಸ್ಮರಿಸಿದ ಬಿ.ಬಿ.ರಾಮಸ್ವಾಮಿಗೌಡ

ಮನಮೋಹನ್ ಸಿಂಗ್ ಅರ್ಥಶಾಸ್ತ್ರದ ವಿದ್ವಾಂಸ

4

Get real time updates directly on you device, subscribe now.


ಕುಣಿಗಲ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅರ್ಥಶಾಸ್ತ್ರದ ವಿದ್ವಾಂಸರಾಗಿ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರೂ ಸರಳತೆ ಹೆಸರಾದಂತಹ ವ್ಯಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಹೇಳಿದರು.

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ತೀರಾ ಕಳಪೆ ಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಹತ್ತು ವರ್ಷದಲ್ಲೆ ಭಾರತ ಆರ್ಥಿಕತೆ ಜಗತ್ತಿನ ನಾಲ್ಕನೆ ಸ್ಥಾನಕ್ಕೇರುವ ನಿಟ್ಟಿನ ಸಾಧನೆ ಮಾಡಿದ್ದು ಅವರ ಬುದ್ಧಿವಂತಿಕೆ ಜೊತೆಯಲ್ಲಿ ದೇಶದ ಆರ್ಥಿಕ, ಕೈಗಾರಿಕಾ ನೀತಿಗಳು ವಿದೇಶಿ ವ್ಯಾಪಾರ ಬಂಡವಾಳ ಯಥೇಚ್ಚವಾಗಿ ದೇಶಕ್ಕೆ ಹರಿದು ಬರುವಂತೆ ಮಾಡಿತ್ತು, ಸದಾ ಸರಳವಾಗಿಯೆ ಇದ್ದ ಅವರು ಅವರನ್ನು ಭೇಟಿ ಮಾಡುವ ಪ್ರತಿಯೊಬ್ಬರನ್ನು ಅಷ್ಟೆ ಗೌರವದಿಂದ ಕಾಣುತ್ತಾ ಕುಶಲೋಪಹರಿ ವಿಚಾರಿಸುತ್ತಿದ್ದರು, ದೇಶದ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಣಕಾಸು ಸಚಿವರಾಗಿ ನಂತರ ಪ್ರಧಾನಮಂತ್ರಿಯಾಗಿ ಅವರು ಕೈಗೊಂಡ ಕ್ರಮಗಳು ಬಡಜನರನ್ನು ಆರ್ಥಿಕವಾಗಿ ಮೇಲೆತ್ತಲು ಸಹಕಾರಿಯಾಗಿತ್ತು, ವಿದೇಶಿ ಬಂಡವಾಳದ ಹರಿವು ಹೆಚ್ಚಾಗಿ ಉದಾರಿ ಕೈಗಾರಿಕೀಕರಣದ ಫಲವಾಗಿ ಯುವಕರಿಗೆ ಹೆಚ್ಚಿನ ಉದ್ಯೋಗ ಸಿಗುವಂತಾಗಿತ್ತು ಎಂದರು.

ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದ ಸಂದರ್ಭವನ್ನು ಬಿ.ಬಿ.ರಾಮಸ್ವಾಮಿಗೌಡ ಸ್ಮರಿಸಿಕೊಂಡರು.

Get real time updates directly on you device, subscribe now.

Comments are closed.

error: Content is protected !!