ಸುಳ್ಳು ದಾಖಲೆ ತೋರಿಸಿದರೆ ಸುಮ್ಮನಿರಲ್ಲ: ಶಾಸಕ ಡಾ.ರಂಗನಾಥ್ ಎಚ್ಚರಿಕೆ

ಕೊರೊನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡಿ

134

Get real time updates directly on you device, subscribe now.

ಕುಣಿಗಲ್: ಮನೆಯಲ್ಲಿ ಐಸೋಲೇಶನ್ನಲ್ಲಿರುವ ಸೋಂಕಿತರ ತಪಾಸಣೆ, ಆರೋಗ್ಯಸೇವೆ ಕೇವಲ ದಾಖಲೆಯಲ್ಲಿ ತೋರಿಸಿದರೆ ನಂಬುವುದಿಲ್ಲ, ನಾನೇ ರೋಗಿಗಳೊಂದಿಗೆ ಮಾತನಾಡಿ ಖಚಿತಪಡಿಸಿಕೊಳ್ಳುವೆ, ತಪ್ಪಾದಲ್ಲಿ ಸುಳ್ಳು ದಾಖಲೆ ತೋರಿಸಿದವರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಶಾಸಕ ಡಾ.ರಂಗನಾಥ್ ಎಚ್ಚರಿಕೆ ನೀಡಿದರು.
ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೊವಿಡ್ ನಿಯಂತ್ರಣ ಕ್ರಮಗಳ ಸಭೆಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಗಂಭೀರ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು, ಅಗತ್ಯ ಆಮ್ಲಜನಕ ಬೆಡ್ ಸಿದ್ಧತೆ ಮಾಡಿಕೊಳ್ಳಬೇಕು, ಗಂಭೀರ ಪರಿಸ್ಥಿತಿಯಲ್ಲಿನ ರೋಗಿಗಳಿಗೆ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಡಳಿತ ಸಹಕಾರ ನೀಡಬೇಕು, ತಾಲೂಕಿನ ಜನತೆಗೆ ತೊಂದರೆ ಆದಲ್ಲಿ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ, ನಮ್ಮ ಕಡೆಯಿಂದ ಸೋಂಕಿತರ ಆರೋಗ್ಯ ವೃದ್ಧಿಗೆ ವಿಟಮಿನ್ ಮಾತ್ರೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನೀಡಲಾಗುವುದು, ಆರೋಗ್ಯ ಇಲಾಖೆಯಿಂದಲೂ ಮಾತ್ರೆ ನೀಡಬೇಕು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕೊವಿಡ್ ಸೋಂಕಿನ ಪ್ರಮಾಣ ದಿನೇ ದಿನೆ ಏರಿಕೆ ಆಗುತ್ತಿದೆ, ಎಲ್ಲಾ ಇಲಾಖಾಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿ ಕ್ರಮಕೈಗೊಂಡು ಸೋಂಕು ನಿಯಂತ್ರಣಕ್ಕೆ ತರಲು ಶ್ರಮಿಸಬೇಕೆಂದು ಎಂದರು.
ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಗಂಭೀರವಲ್ಲದ ಸೋಂಕಿತರನ್ನು ಮನೆಯಲ್ಲಿ ಇರಿಸಲಾಗಿದ್ದು ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ದೂರುಗಳಿವೆ, ಇಂತಹವರು ಎಚ್ಚರದಿಂದ ವರ್ತಿಸಬೇಕು, ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ, ಸೋಂಕಿತರು ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸುತ್ತಾ ತೊಂದರೆ ಉಂಟು ಮಾಡಿದಲ್ಲಿ ಮುಲಾಜಿಲ್ಲದೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಪತ್ತೆಗೆ ಪಿಡಿಒಗಳು ಸಹಕಾರ ನೀಡಬೇಕು. ದಿನಕ್ಕೆ ತಾಲೂಕಿನಿಂದ 800 ತಪಾಸಣೆ ವರದಿ ನೀಡಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಜಗದೀಶ್ ಮಾತನಾಡಿ, ಇದುವರೆಗೂ 53 ಸಾವಿರಕ್ಕೂ ಹೆಚ್ಚು ತಪಾಸಣೆ ನಡೆಸಿದ್ದು ಗ್ರಾಮಾಂತರ ಪ್ರದೇಶದಲ್ಲಿ ಪಿಡಿಒ ಸೇರಿದಂತೆ ಯಾರೂ ಸಹಕಾರ ನೀಡುತ್ತಿಲ್ಲ, ಒಟ್ಟಾರೆ 213 ಸೋಂಕಿತರನ್ನು ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವೈದ್ಯಾಧಿಕಾರಿ ಗಣೇಶಬಾಬು ಮಾತನಾಡಿ, 52 ಆಮ್ಲಜನಕ ಬೆಡ್ ಇದ್ದು, 43 ಮಂದಿ ದಾಖಲಾಗಿದ್ದಾರೆ, ಇನ್ನು 10 ಬೆಡ್ ವ್ಯವಸ್ಥೆ ಮಾಡಬೇಕಿದೆ ಎಂದರು.
ಡಿವೈಎಸ್ಪಿ ರಮೇಶ್ ಮಾತನಾಡಿ, ಪಿಡಿಒಗಳು ಗ್ರಾಮಾಂತರ ಪ್ರದೇಶದಲ್ಲಿ ಕೊವಿಡ್ ನಿಯಮಾವಳಿ ಉಲ್ಲಂಘನೆ ವಿರುದ್ಧ ಇದುವರೆಗೂ ದೂರು ನೀಡಿಲ್ಲ, ದೂರು ನೀಡಿದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು, ಪಟ್ಟಣದಲ್ಲಿ ಈಗಾಗಲೆ ಬಾರ್ ಅಂಡ್ ರೆಸ್ಟೋರೆಂಟ್, ರಿಕ್ರಿಯೇಷನ್ ಕ್ಲಬ್ಗಳಲ್ಲಿ ನಿಯಮ ಉಲ್ಲಂಸಿದವರ ಮೇಲೆ ಐದು ಪ್ರಕರಣ ದಾಖಲಿಸಲಾಗಿದೆ ಎಂದರು.
ಪುರಸಭಾಕ್ಷ ನಾಗೇಂದ್ರ, ತಹಶೀಲ್ದಾರ್ ಕಲ್ಯಾಣಿ, ಇಒ ಜೋಸೆಫ್, ಮುಖ್ಯಾಧಿಕಾರಿ ರವಿಕುಮಾರ್ ಸೇರಿದಂತೆ ಗ್ರಾಪಂ ಪಿಡಿಒ, ಇತರೆ ಇಲಾಖಾಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!