ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಉರುಳಿಬಿದ್ದು ಚಾಲಕ ಮೃತಪಟ್ಟು ಎಂಟು ಮಂದಿ ಗಾಯಗೊಂಡ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಅಂಚೆಪಾಳ್ಯ ಬಳಿ ಸಂಭವಿಸಿದೆ.
ಮೃತನನ್ನು ಮಂಗಳೂರು ಬಿ.ಸಿ.ರೋಡ್ ವಾಸಿ ಮಹಮದ್ ಇಬ್ರಾಹಿಂ (40) ಎಂದು ಗುರುತಿಸಲಾಗಿದೆ, ಉಡುಪಿಯಿಂದ ಬೆಂಗಳೂರಿಗೆ ಹೊರಟ ಖಾಸಗಿ ಸ್ಲೀಪರ್ ಬಸ್ ಶನಿವಾರ ಬೆಳಗ್ಗೆ ನಾಲ್ಕು ಗಂಟೆ ಸಮಯದಲ್ಲಿ ತಾಲ್ಲೂಕಿನ ಅಂಚೆಪಾಳ್ಯ ಬಳಿ ರಸ್ತೆ ಉಬ್ಬಿನ ಸಮೀಪ ಆಗಮಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಹಾಕಿದ್ದ ಸೂಚನ ಫಲಕಕ್ಕೆ ಗುದ್ದಿದ ಪರಿಣಾಮ ಬಸ್ ಉರುಳಿ ಬಿದ್ದು ಚಾಲಕ ಗಾಯಗೊಂಡು ಚಿಕಿತ್ಸೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು, ಎಂಟು ಮಂದಿ ಗಾಯಗೊಂಡಿದ್ದು, ಕುಣಿಗಲ್ ಪೊಲೀಸರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ರವಾನಿಸಿದರು, ಜಖಂಗೊಂಡು ಹೆದ್ದಾರಿಯಲ್ಲಿ ಬಿದ್ದಿದ್ದ ಬಸ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Get real time updates directly on you device, subscribe now.
Prev Post
Comments are closed.