ಮಧುಗಿರಿ: ಪಟ್ಟಣದ ರಾಘವೇಂದ್ರ ಕಾಲೋನಿಯಲ್ಲಿರುವ ಶ್ರೀಶರಂಗೆರಿ ಶಂಕರ ಮಠ ಸಮೀಪ ಇರುವ ಮನೆಯ ಮುಂದೆ ಮಹಿಳೆಯೊಬ್ಬರು ನೀರು ಹಾಕಿ ರಂಗೋಲಿ ಇಡುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿ ಒಬ್ಬ ನಡೆದುಕೊಂಡು ಬಂದು ಮಹಿಳೆಯ ಕತ್ತು ಹಿಸುಕಿ 100 ಗ್ರಾಂ ನಲ್ಲಿ ಅರ್ಧ ಭಾಗದಷ್ಟು ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ಬೆಳಗ್ಗಿನ ಜಾವ 5.45ರಲ್ಲಿ ನಡೆದಿದೆ.
ಗೊಬ್ಬರದ ಅಂಗಡಿಯ ರಮೇಶ್ ಅವರ ಪತ್ನಿ ಸ್ವರ್ಣ ಅವರು ಬೆಳಗ್ಗೆ ಎಂದಿನಂತೆ ಮನೆ ಮುಂದೆ ಸಾರಿಸಿ ರಂಗೋಲಿ ಇಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಈ ಹಿಂದೆ ಇದೇ ರಸ್ತೆಯಲ್ಲಿ ನಂದಿನಿ ಹಾಲಿನ ಕೇಂದ್ರದ ಇಂದಿರಮ್ಮನವರ ಚಿನ್ನದ ಸರವನ್ನು ಸಹ ಕಿತ್ತುಕೊಂಡು ಹೋಗಲಾಗಿತ್ತು, ಸ್ಥಳಕ್ಕೆ ಮಧುಗಿರಿ ಪಿಎಸ್ ಐ ವಿಜಯಕುಮಾರ್ ಆಗಮಿಸಿ ತನಿಖೆ ನಡೆಸಿದರು.
ಶನಿವಾರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಪ್ರಸನ್ನ ಪಾರ್ವತಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರದೋಷ ಪೂಜೆಯ ನಂತರ ಕಳ್ಳರಿಬ್ಬರು ದೇವಸ್ಥಾನದ ಹಿಂಭಾಗದಿಂದ ಒಳಗೆ ಪ್ರವೇಶಿಸಿದ್ದರು, ಆಗ ಭಕ್ತರೂಬ್ಬರು ಇದನ್ನು ನೋಡಿ ಕಿರುಚಿದ್ದಾರೆ, ಭಕ್ತಾದಿಗಳು ಹಾಗೂ ಪೊಲೀಸರು ತಪಾಸಣೆ ನಡೆಸಿದಾಗ ದೇವಾಲಯದ ಪ್ರಾಂಗಣದಲ್ಲಿ ಯಾರು ಕಂಡು ಬರಲಿಲ್ಲ.
Comments are closed.