ರಸ್ತೆ ತುಂಬಾ ಖಾಲಿ ಕಪ್- ಜನರ ಆಕ್ರೋಶ

8

Get real time updates directly on you device, subscribe now.


ಶಿರಾ: ವಾರ್ಷಿಕೋತ್ಸವದ ಸಂದರ್ಭದಲ್ಲಿ ಗ್ರಾಹಕರನ್ನು ತೃಪ್ತಿಪಡಿಸಲು ವಿತರಿಸಲಾಗಿದ್ದ ಪಾನೀಯದ ಖಾಲಿ ಕಪ್ ಗಳು ರಸ್ತೆಯ ಮೇಲೆಲ್ಲಾ ಹರಡಿ ಅಸಹ್ಯ ಹುಟ್ಟಿಸುವ ದೃಶ್ಯ ನಗರದಲ್ಲಿ ಹಾದುಹೋಗುವ ರಾ.ಹೆ.ನಂ. 4ರ ಗಿರಿಯಾಸ್ ಮಾಲ್ ಬಳಿ ಕಳೆದೆರಡು ದಿನದಿಂದ ಸಾಮಾನ್ಯವಾಗಿದೆ.

ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂತೇಪೇಟೆ ಬಡಾವಣೆಯಲ್ಲಿ ಕಳೆದ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಉದ್ಘಾಟನೆಗೊಂಡಿದ್ದ ಗಿರಿಯಾಸ್ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಅಂಗಡಿ, ಶನಿವಾರ ವಾರ್ಷಿಕೋತ್ಸವ ಆಚರಿಸಿದೆ, ಈ ವೇಳೆ ಸಂಜೆಗೆ ಭರ್ಜರಿ ಪಾರ್ಟಿ ಏರ್ಪಡಿಸಿದ್ದು, ಗ್ರಾಹಕರಿಗೆ ಉಡುಗೊರೆ ಜೊತೆಗೆ ಸವಿಯಲು ಪಾನೀಯ ಸರಬರಾಜು ಮಾಡಿದೆ, ಪಾನೀಯ ಸವಿದ ಗ್ರಾಹಕರು ಕುಡಿದ ಪೇಪರ್ ಕಪ್ಪುಗಳನ್ನು ಸಂಗ್ರಹಿಸಿ, ಅಂಗಡಿ ಪಕ್ಕದಲ್ಲೇ ರಾಶಿ ಹಾಕಿದ್ದು, ಕೆಲವರಂತೂ ಅಂಗಡಿ ಮುಂಭಾಗದ ರಸ್ತೆಯಲ್ಲೇ ಎಸೆದಿದ್ದು, ಇಡೀ ರಸ್ತೆ ಗಲೀಜುಗೊಂಡಿದೆ.
ತನ್ನ ಅಂಗಡಿ ಪ್ರವೇಶಕ್ಕೆ ಹಸಿರು ಕಾರ್ಪೆಟ್ ಹಾಸಿ, ಗ್ರಾಹಕರಿಂದ ಅಂಗಡಿ ಮಳಿಗೆ ಗಲೀಜು ಆಗುವುದರಿಂದ ರಕ್ಷಿಸಿಕೊಂಡಿರುವ ಅಂಗಡಿಯವರು, ಮುಂದಿನ ರಸ್ತೆಗೂ ತಮಗೂ ಸಂಬಂಧವೇ ಇಲ್ಲ, ರಸ್ತೆಯನ್ನು ಸ್ವಚ್ಛವಾಗಿಡುವುದು ನಗರಸಭೆ ಕೆಲಸ. ತಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿರುವುದು ಸಾರ್ವಜನಿರಲ್ಲಿ ಹೇಸಿಗೆ ಹುಟ್ಟಿಸಿದೆ, ವಿತರಿಸಿದ ಪೇಪರ್ ಕಪ್ಪುಗಳನ್ನು ಸಂಗ್ರಹಿಸಿ, ನಗರಸಭೆಗೆ ಹಸ್ತಾಂತರ ಮಾಡಿದ್ದರೂ ಸಾಕಿತ್ತು, ತನ್ನಂಗಡಿ ಬಗ್ಗೆ ಇರುವ ಕಾಳಜಿ, ತನ್ನಂಗಡಿಯ ಮುಂದಿನ ರಸ್ತೆ ಬಗ್ಗೆ ಇಲ್ಲದಿರುವ ಅಂಗಡಿ ಬಗ್ಗೆ ಸಾರ್ವಜನಿಕರಲ್ಲಿ ಅಸಮಧಾನದ ಮಾತುಗಳು ಕೇಳಿಬಂದಿವೆ.

ನಗರಸಭೆ ವಿಫಲ: ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಕಸ ಚಲ್ಲುವ ಅಂಗಡಿ, ಹೋಟೆಲ್ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಗರಸಭೆ ವಿಫಲಗೊಂಡಿರುವುದು, ಸಮಸ್ಯೆ ಹೆಚ್ಚಾಗಲು ಕಾರಣ ಎನ್ನಬಹುದು, ಸಾರ್ವಜನಿಕರು, ಜನಪ್ರತಿನಿಧಿಗಳು ಅಥವಾ ಮಾಧ್ಯಮಗಳು ಗಮನ ಸೆಳೆದಾಗ ಮಾತ್ರ, ತೋರಿಸಿದ್ದನ್ನು ಪೌರಕಾರ್ಮಿಕರ ಮೂಲಕ ಸ್ವಚ್ಛಗೊಳಿಸುವ ನಗರಸಭೆ, ಸ್ವಚ್ಛವಾಗಿಟ್ಟುಕೊಳ್ಳುವುದು ಅಂಗಡಿ, ಹೋಟೆಲ್ ಮಾಲೀಕರ ಜವಾಬ್ದಾರಿ ಎನ್ನುವುದನ್ನು ಮನವರಿಕೆ ಮಾಡಿಕೊಡಲೂ ಸಹಾ ಮರೆತಿದೆ, ಆದ್ದರಿಂದಲೇ ಸಮಸ್ಯೆ ಹೆಚ್ಚಲು ಕಾರಣವಾಗಿದೆ.

Get real time updates directly on you device, subscribe now.

Comments are closed.

error: Content is protected !!