ಸಂಬಳಕ್ಕಾಗಿ ಮಹಿಳಾ ಕಾರ್ಮಿಕರ ಪ್ರತಿಭಟನೆ

414

Get real time updates directly on you device, subscribe now.

ಕುಣಿಗಲ್: ಕಳೆದ ಒಂದುವರೆ ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದ ಮಹಿಳಾ ಕಾರ್ಮಿಕರು ಸಂಬಳಕ್ಕಾಗಿ ಕಾರ್ಖಾನೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರ ವಲಯದ ಮಲ್ಲಿಪಾಳ್ಯ ಸಮೀಪದಲ್ಲಿ ಗಾರ್ಮೆಂಟ್ ಕಾರ್ಖಾನೆ ಇದ್ದು, ಇದರಲ್ಲಿ ಸುಮಾರು 85ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಪಟ್ಟಣ ಸೇರಿದಂತೆ ತಾಲೂಕಿನ ಹುಲಿಯೂರುದುರ್ಗ, ಅಮೃತೂರು, ಎಡೆಯೂರು ಇತರೆಡೆ ಗ್ರಾಮಾಂತರ ಪ್ರದೇಶದಿಂದ ಬಂದು ಕೆಲಸ ಮಾಡುತ್ತಿದ್ದರು, ಆದರೆ ಕಾರ್ಮಿಕರಿಗೆ ಕಳೆದ ಒಂದುವರೆ ತಿಂಗಳಿನಿಂದ ಸಂಬಳ ನೀಡದೆ ಮಾಲೀಕರು ತಗಾದೆ ತೆಗೆದರಲ್ಲದೆ ಏಕಾಏಕಿ ಕಾರ್ಖಾನೆ ಬಾಗಿಲು ಮುಚ್ಚಿ ಸಂಬಳವೂ ನೀಡದೆ ಮೆಸೇಜ್ನಲ್ಲಿ ಕಾರ್ಮಿಕರಿಗೆ ಸಂಬಳ ತಡವಾಗಿ ನೀಡುತ್ತೇನೆ ಎಂದು ಹೇಳಿದ್ದು, ಸಂಬಳ ನೀಡಿಲ್ಲ ಎಂದು ಪ್ರತಿಭಟನಾನಿರತ ಮಹಿಳಾ ಕಾರ್ಮಿಕರಾದ ನಂಜಮ್ಮ ಇತರರು ಆರೋಪಿಸಿದ್ದಾರೆ.
ನಾವು ಈ ಕೆಲಸವನ್ನೆ ನಂಬಿಕೊಂಡಿದ್ದೇವೆ, ಒಂದುವರೆ ತಿಂಗಳ ಸಂಬಳ ನೀಡಿಲ್ಲ, ಸಂಬಳ ಯಾವಾಗ ನೀಡುತ್ತೇವೆ ಎಂಬ ಮಾಹಿತಿ ನೀಡಿಲ್ಲ, ಇಲ್ಲಿ ಕೇಳಿದರೆ ಉತ್ತರ ನೀಡಲು ಯಾರೂ ಇಲ್ಲ, ನಾವು ಜೀವನ ನಡೆಸಲು ಕಷ್ಟವಾಗಿದೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ಯಾರೂ ಸಹ ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕಾರ್ಖಾನೆಯು ಸೆಕ್ಯೂರಿಟಿ ಗಾರ್ಡ್ ನೋಡಿಕೊಳ್ಳುತ್ತಿದ್ದು ಅವರನ್ನು ಕೇಳಿದರೆ ಮಾಲೀಕರ ನಂಬರ್ ಇಲ್ಲ, ನಮಗೆ ನೋಡಿಕೊಳ್ಳಲು ಹೇಳಿದ್ದಾರೆ ಅಷ್ಟೆ ಎನ್ನುವ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ, ಸಂಬಂಧಪಟ್ಟವರು ಗಮನ ಹರಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಮಹಿಳಾ ಕಾರ್ಮಿಕರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!