ಅಪಘಾತದಲ್ಲಿ ಯುವಕ ಸಾವು

8

Get real time updates directly on you device, subscribe now.


ಕುಣಿಗಲ್: ಹೊಸ ವರ್ಷಾಚರಣೆಗೆ ಪಟ್ಟಣಕ್ಕೆ ಬಂದು ಕೇಕ್, ಬಿರ್ಯಾನಿ ತೆಗೆದುಕೊಂಡು ಹೋಗುತ್ತಿದ್ದ ಯುವಕನ ಬೈಕ್ ಗೆ ಅಪಚರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾಗಿದ್ದು, ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವಾಗ ಮೃತಪಟ್ಟ ಘಟನೆ ನಡೆದಿದೆ.
ಮೃತನನ್ನು ತುಮಕೂರು ಗ್ರಾಮಾಂತರದ ಮಣಿಕುಪ್ಪೆ ಗ್ರಾಮದ ಮಧು (28) ಎಂದು ಗುರುತಿಸಲಾಗಿದೆ, ಈತ ಹೊಸ ವರ್ಷಾಚರಣೆಗೆ ಮಂಗಳವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿ ವಾಪಸ್ ಹೋಗುವಾಗ ರಾಜ್ಯ ಹೆದ್ದಾರಿ 33ರ ದೊಡ್ಡ ಮಳಲವಾಡಿ ಸಮೀಪ ಅಪರಿಚತ ವಾಹನ ಡಿಕ್ಕಿಹೊಡೆದು ರಸ್ತೆ ಬದಿಗೆ ಉರುಳಿಬಿದ್ದಿದ್ದ, ದಾರಿಹೋಕರು ನೋಡಿ ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!