ಕುಣಿಗಲ್: ಅಮರಶಿಲ್ಪಿ ಜಕಣಾಚಾರಿ ತಮ್ಮ ಕಲಾ, ವೃತ್ತಿ ಕೌಶಲ್ಯದಿಂದಾಗಿ ನೂರಾರು ವರ್ಷಗಳೆ ಕಳೆದರೂ ಇನ್ನು ನೆನಪಿನಲ್ಲಿ ಉಳಿಯುವಂತಾಗಿದ್ದಾರೆ ಎಂದು ಗ್ರೇಡ್-2 ತಹಶೀಲ್ದಾರ್ ಯೋಗೇಶ್ ಹೇಳಿದರು.
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ, ವಿಶ್ವಕರ್ಮ ಸಮಾಜ, ಅಭಿವೃದ್ಧಿ ಸಮಿತಿ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಕಣಾಚಾರಿಯವರು ಇತಿಹಾಸದಲ್ಲಿ ಆಗಿಹೋಗಿದ್ದರೂ ಅವರ ಕಾರ್ಯಗಳು ಇನ್ನು ಸ್ತುತ್ಯಾರ್ಹವಾಗಿವೆ, ವಿಶ್ವಕರ್ಮ ಜನಾಂಗವು ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಜನಾಂಗದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಹಿರಿಯರು ಶ್ರಮ ವಹಿಸಬೇಕು, ಎಲ್ಲಾ ಸಮಸ್ಯೆಗಳ ನಿವಾರಣೆಗೆ ಶೈಕ್ಷಣಿಕ ಪ್ರಗತಿಯೆ ಪರಿಹಾರ ಎಂಬುದ ಮರೆಯಬಾರದು ಎಂದರು.
ತಾಲೂಕು ವಿಶ್ವಕರ್ಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಜನಾಂಗವೂ ತಮ್ಮದೆ ಅದ ಕೊಡುಗೆ ನೀಡುತ್ತಿದೆ, ಜನಾಂಗದ ಸಂಘಟನೆ ಹಾಗೂ ಸಮಸ್ಯೆ ನಿವಾರಿಸಲು ವಿಶ್ವಕರ್ಮ ಭವನ ನಿರ್ಮಾಣ ಅತ್ಯಗತ್ಯವಾಗಿದೆ, ತಾಲೂಕು ಆಡಳಿತ ಭವನಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡುವ ಮೂಲಕ ಜನಾಂಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಮಾಜದ ಗೌರವಾಧ್ಯಕ್ಷ ನರಸಿಂಹ ಮೂರ್ತಾಚಾರ್ಯ, ಉಪಾಧ್ಯಕ್ಷ ಮೂರ್ತಾಚಾರ್ಯ, ಕಾರ್ಯದರ್ಶಿ ಕೋಟೆಕುಮಾರ, ಖಜಾಂಚಿ ಜ್ಞಾನೇಂದ್ರಾಚಾರ್, ನಿರ್ದೇಶಕರಾದ ಕೋಟೆಪ್ರಕಾಶ, ಪದ್ಮನಾಭಾಚಾರ್, ಮೂರ್ತಿ, ಪ್ರಮುಖರಾದ ವರದರಾಜು, ನಾರಾಯಣ, ರಾಮಚಂದ್ರಯ್ಯ ಇತರರು ಇದ್ದರು.
Comments are closed.