ಒಂದೇ ದಿನ 1,199 ಮಂದಿಗೆ ಸೋಂಕು: ಇಬ್ಬರನ್ನು ಬಲಿ ಪಡೆದ ಮಹಾಮಾರಿ

ತುಮಕೂರು ಜಿಲ್ಲೆಯಲ್ಲಿ ಕೊರೊನಾರ್ಭಟ

705

Get real time updates directly on you device, subscribe now.

ತುಮಕೂರು: ದೇಶದಲ್ಲಿ ಕೊರೊನಾ 2ನೇ ಅಲೆ ತನ್ನ ಅಬ್ಬರ ಮುಂದುವರೆಸಿದೆ, ಕರ್ನಾಟಕ ರಾಜ್ಯದಲ್ಲೂ ಮಹಾಮಾರಿ ಅಟ್ಟಹಾಸ ಜೋರಾಗಿದೆ, ಇನ್ನು ತುಮಕೂರು ಜಿಲ್ಲೆಯಲ್ಲೂ ಕೊರೊನಾ ಆರ್ಭಟ ಶುರುವಾಗಿದೆ.
ಇಷ್ಟು ದಿನ ನೂರು, ಇನ್ನೂರು, ಐನೂರು ಪ್ರಕರಣಗಳು ಪತ್ತೆಯಾಗುತ್ತಿದ್ದವು, ಆದರೆ ಬುಧವಾರ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಜಿಲ್ಲಾಡಳಿತ ಕೊರೊನಾ ತಡೆಗೆ ಸಕಲ ವ್ಯವಸ್ಥೆ ಕೈಗೊಂಡಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ.
ಜಿಲ್ಲೆಯಾದ್ಯಂತ 1,199 ಮಂದಿಗೆ ಕೋವಿಡ್- 19 ದೃಢಪಟ್ಟಿದೆ, ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 32,837 ಏರಿಕೆ ಕಂಡಿದೆ. 5,020 ಸಕ್ರಿಯ ಪ್ರಕರಣಗಳ ಪೈಕಿ 374 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 637, ಚಿ.ನಾ.ಹಳ್ಳಿ 56, ಗುಬ್ಬಿ 109, ಕೊರಟಗೆರೆ 27, ಕುಣಿಗಲ್ 74, ಮಧುಗಿರಿ 48, ಪಾವಗಡ 65, ಶಿರಾ 35, ತಿಪಟೂರು 99, ತುರುವೇಕೆರೆಯಲ್ಲಿ 49 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ, ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಗ್ರಾಮದ ವ್ಯಕ್ತಿ (38) ಮತ್ತು ಗುಬ್ಬಿ ತಾಲೂಕಿನ ಮಾರುತಿ ನಗರದ ವ್ಯಕ್ತಿ (64) ಮೃತರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ, ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.

Get real time updates directly on you device, subscribe now.

Comments are closed.

error: Content is protected !!