ಕುಣಿಗಲ್: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಯಡವಟ್ಟಿನಿಂದ ತಮಗೆ ಬರಬೇಕಿದ್ದ ಆಸ್ತಿಯ ಹಕ್ಕು ಇನ್ನೊಬ್ಬರಿಗೆ ಸೇರಿದೆ ಎಂದು ಆರೋಪಿಸಿದ ಮಹಿಳೆಯೊಬ್ಬರ ಸಮರ್ಪಕ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ತಾಪಂ ಕಾರ್ಯಾಲಯದ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿದ್ದ ಮಹಿಳೆ ಲಕ್ಷ್ಮೀದೇವಮ್ಮ ಮಾತನಾಡಿ, ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಬೋರಸಂದ್ರ ಗ್ರಾಮದವರಾಗಿದ್ದು ತಾವು ಲೇ.ಮೂಗೂರಯ್ಯ ಉ.ಗೌಡಯ್ಯ ವಾರಾಸುದಾರರಾಗಿದ್ದೇವೆ, ತಮ್ಮ ಮಾವನವರಾದ ಗೌಡಯ್ಯನವರಿಗೆ ಇಬ್ಬರು ಪತ್ನಿಯರಿದ್ದು ಮೊದಲನೇ ಪತ್ನಿ ಸಿದ್ದಮ್ಮ, ಎರಡನೇ ಪತ್ನಿ ಹೊನ್ನಮ್ಮ ಉ. ಮರಿಯಮ್ಮ ಎಂಬುವರಾಗಿದ್ದಾರೆ, ಮಾವನವರು ಪವತಿಯಾದ ನಂತರ ಅವರಿಗೆ ಸೇರಿದ ಆಸ್ತಿಯ ಖಾತೆ ಸಂಖ್ಯೆ 42 ನ್ನು ನಿಯಮ ಬದ್ಧವಾಗಿ ಇಬ್ಬರಿಗೂ ವರ್ಗಾವಣೆ ಮಾಡಬೇಕಿತ್ತು, ಆದರೆ ಗ್ರಾಪಂ ನಲ್ಲಿ ಎರಡನೇ ಹೆಂಡತಿಯ ಹೆಸರಿಗೆ ವರ್ಗಾವಣೆ ಮಾಡಿದ್ದು ಇದನ್ನು ವಜಾಗೊಳಿಸುವಂತೆ ಹಲವಾರು ಬಾರಿ ಮನವಿ ನೀಡಿದ್ದರೂ ಗ್ರಾಪಂ ಕ್ರಮ ಕೈಗೊಳ್ಳದ ಕಾರಣ ಸಮರ್ಪಕ ನ್ಯಾಯಕ್ಕಾಗಿ ಆಗ್ರಹಿಸಿ ತಾಪಂ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು, ಸ್ಥಳಕ್ಕೆ ಆಗಮಿಸಿದ ತಾಪಂ ವ್ಯವಸ್ಥಾಪಕ ರಾಜಣ್ಣ ಈ ನಿಟ್ಟಿನಲ್ಲಿ ಇಒ ಅವರ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
Comments are closed.