ಭೀಮ ಕೋರೆಗಾಂವ್ ನಡೆದದ್ದು ಶಿಕ್ಷಣ ಕ್ರಾಂತಿಗೆ

9

Get real time updates directly on you device, subscribe now.


ಕುಣಿಗಲ್: ಭೀಮ ಕೋರೆಗಾಂವ್ ಯುದ್ಧ ನಡೆದಿದ್ದು ಯಾವುದೆ ಆಸ್ತಿ ಕಬಳಿಗೆ, ರಾಜ್ಯಕಬಳಿಕೆಗೆ ಅಲ್ಲ, ಮನುವಾದಿಗಳ ತಾರತಮ್ಯ ಧೋರಣೆ ವಿರುದ್ಧ ಶಿಕ್ಷಣ ಕ್ರಾಂತಿಗಾಗಿ ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಜು ವೆಂಕಟಪ್ಪ ಹೇಳಿದರು.
ಬುಧವಾರ ರಾತ್ರಿ ತಾಲೂಕು ಆಡಳಿತಸೌಧದ ಆವರಣದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭೀಮ ಕೋರೆಂಗಾವ್ ಯುದ್ಧದ ಪರಿಣಾಮ ಕೆಳ ಸ್ಥರದ ಜನರಿಗೂ ವಿದ್ಯೆ ಸಿಗುವಂತಾಯಿತು, ಇದರ ಪರಿಣಾಮವಾಗಿ ಮನುವಾದಿಗಳು ಬಿಗಿಹಿಡಿತದಲ್ಲಿದ್ದ ಶಿಕ್ಷಣ ವ್ಯವಸ್ಥೆ ಎಲ್ಲಾ ಸ್ಥರದ ಜನತೆಗೆ ಸಿಗುವಂತಾಗಿ ಹಲವು ಮಹನೀಯರು ಶಿಕ್ಷಣ ಪಡೆಯುವಂತಾಯಿತು, ಈ ವಿಜಯೋತ್ಸವವು ರಾಷ್ಟ್ರದಲ್ಲಿ ತುಳಿತಕ್ಕೆ ಒಳಗಾದ ಜನತೆಗೆ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಆದ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಎಂದರೆ ತಪ್ಪಲಾಗಲಾರದು ಎಂದರು.

ಆನಮತ ಸಾಮರಸ್ಯವೇದಿಕೆಯ ಬಿ.ಜಿ.ಗಂಗಾಧರ ಮಾತನಾಡಿ, ಇತಿಹಾಸದಲ್ಲಿ ಮನುವಾದಿಗಳಿಂದ ಮುಚ್ಚಿಡಲಾಗಿದ್ದ ಭೀಮಕೋರೆಗಾಂವ್ ವಿಜಯೋತ್ಸವದ ವಿಷಯವನ್ನು ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರು ಇಂಗ್ಲೆಂಡ್ ನ ಗ್ರಂಥಾಲಯದಲ್ಲಿ ಅಂದಿನ ಬ್ರಿಟಿಷ್ ಅಧಿಕಾರಿ ಬರೆದಿದ್ದ ಚಾರಿತ್ರಿಕ ಘಟನೆಯ ಪುಸ್ತಕ ಓದಿ, ಭಾರತಕ್ಕೆ ಬಂದು ಕೊರೆಗಾಂವ್ ನಲ್ಲಿನ ವಿಜಯೋತ್ಸವ ಸ್ಮಾರಕ ಸ್ಥಾಪಿಸಿ ಹಿಂದೆ ಶಿಕ್ಷಣಕ್ಕಾಗಿ ನಡೆದ ಯುದ್ಧದ ಇತಿಹಾಸವನ್ನು ಜನತೆಯ ಮುಂದಿಟ್ಟರು, ಈ ವಿಜಯೋತ್ಸವವು ಇಂದಿಗೂ ಪ್ರಸ್ತುತವಾಗಿದೆ, ಈ ಹೋರಾಟ ಇಂದಿಗೂ ನಮಗೆ ಮಾದರಿಯಾಗಿದೆ ಎಂದರು.
ಪ್ರಗತಿಪರ ಚಿಂತಕ ಜಿ.ಕೆ.ನಾಗಣ್ಣ ಮಾತನಾಡಿದರು, ಶೋಷಿತ ಸಮುದಾಯ ವೇದಿಕೆಯ ವಾಣಗೆರೆ ಪ್ರಶಾಂತ್, ಪ್ರಮುಖರಾದ ಗೋಪಾಲ, ತಿಮ್ಮಪ್ಪ, ಶ್ರೀನಿವಾಸ, ಕೃಷ್ಣರಾಜು, ಕುಮಾರ, ರಂಗಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!