ತುಮಕೂರು: ತುಮಕೂರು ತಾಲ್ಲೂಕು, ಹಿರೇಹಳ್ಳಿ ಅಂಚೆ, ಪೆಮ್ಮನಹಳ್ಳಿ ಗ್ರಾಮದಲ್ಲಿ 6ನೇ ತರಗತಿ ಓದುತ್ತಿರುವ 11ನೇ ವರ್ಷದ ಮೋನಿಷ ಎಂಬ ಹೆಣ್ಣು ಮಗು ತನ್ನ ತಂದೆಯ ಅಂತ್ಯಕ್ರಿಯೆ ನಡೆಸಿ ನಾಗರಿಕರಿಗೆ ಮಾದರಿಯಾಗಿದ್ದಾಳೆ.
ಕಳೆದ ಎರಡು ದಿನಗಳ ಹಿಂದೆ ತನ್ನ ತಂದೆ ಕೆಂಪರಾಜು (48) ಕ್ಯಾನ್ಸರ್ ಖಾಯಿಲೆಯಿಂದ ಸಾವನ್ನಪ್ಪಿರುತ್ತಾರೆ, ಮೂಲತಃ ಆಟೋಚಾಲಕರಾಗಿದ್ದ ತನ್ನತಂದೆ ಬಡತನದಿಂದಲೇ ಜೀವನ ನಡೆಸುತ್ತಿದ್ದರು, ಆತನಿಗೆ ಇಬ್ಬರೂ ಸಹ ಹೆಣ್ಣು ಮಕ್ಕಳಿದ್ದು ಹಿರಿಯ ಮಗಳಾದ ಮೋನಿಷ ತನ್ನ ತಂದೆಯ ಅಂತ್ಯಕ್ರಿಯೆ ನಡೆಸಿ ಗ್ರಾಮಸ್ಥರು ಹುಬ್ಬೇರಿಸುವಂತೆ ಮಾಡಿದ್ದಾಳೆ.
ಈಕೆ ಕಾರ್ಯಕ್ಕೆ ಗ್ರಾಮಸ್ಥರು ಸಹ ಬೆಂಬಲಿಸಿದ್ದು, ಹಲವಾರು ಜನರಿಗೆ ಮಾದರಿಯಾಗಿದ್ದಾಳೆ, ಇನ್ನು ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ, ಹೆಣ್ಣು ಬರೀ ಆರತಿಗೆ ಮಾತ್ರವೇ ಸೀಮಿತವಾಗಿರದೇ ಕೀರ್ತಿ ತಂದು ಕೊಡಲು ಸಹ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎನ್ನುವುದಕ್ಕೆ ಮೋನಿಷ ಸಾಕ್ಷಿಯಾಗಿದ್ದಾಳೆ.
Comments are closed.