ಬಾಯಿಪುಲೆ ಆಧುನಿಕ ಭಾರತದ ಮೊದಲ ಶಿಕ್ಷಕಿ

ಮಹಿಳೆಯರು ಸವಾಲುಗಳನ್ನು ಮೆಟ್ಟಿನಿಂತರೆ ಗೆಲುವು ಖಚಿತ: ಶುಭಕಲ್ಯಾಣ್

6

Get real time updates directly on you device, subscribe now.


ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆ ಸಂಯುಕ್ತಾಶ್ರಯದಲ್ಲಿ ತುಮಕೂರು ಸ್ಲಂ ಭವನದಲ್ಲಿ ಸಾವಿತ್ರಿ ಬಾಪುಲೆ ಅವರ 194ನೇ ಜಯಂತಿ ಆಯೋಜಿಸಲಾಗಿತ್ತು.
ಸಾವಿತ್ರಿ ಬಾಯಿಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಇಂದು ಸಮಾಜದಲ್ಲಿ ಶಿಕ್ಷಣವಿದ್ದರೇ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ಇಂದು ಆಸ್ತಿ, ಭೂಮಿ, ಮನೆ ಅಥವಾ ಚಿನ್ನಕ್ಕಿಂತ ಶಿಕ್ಷಣವೇ ಮನುಷ್ಯನಿಗೆ ದೊಡ್ಡ ಆಸ್ತಿ, 1848ರಲ್ಲಿ ಪತಿ ಜ್ಯೋತಿ ಬಾಪುಲೆ ಅವರ ಸಹಕಾರದೊಂದಿಗೆ ತಳ ಸಮುದಾಯಗಳ ಹೆಣ್ಣುಗಳಿಗೆ ಪುಣೆಯಲ್ಲಿ ಶಾಲೆ ಪ್ರಾರಂಭಿಸಿದರು, ಕೂಲಿ ಕಾರ್ಮಿಕರಿಗೆ ರಾತ್ರಿಶಾಲೆ ಪ್ರಾರಂಭಿಸಿ ದಲಿತರಿಗಾಗಿ ಮನೆಯ ಬಾವಿಯಲ್ಲಿ ಕುಡಿಯುವ ನೀರು ಬಿಟ್ಟುಕೊಟ್ಟರು, ಭಾರತದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಾವಿತ್ರಿ ಬಾಯಿಪುಲೆ ಕೊಡುಗೆ ಅಪಾರವಾಗಿದೆ, ಬ್ರಿಟಿಷ್ ಸರ್ಕಾರ ಇವರ ಸೇವೆಯನ್ನು ಶ್ಲಾಸಿ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ಕೊಟ್ಟಿದೆ, ಅವರ ಪರಿಶ್ರಮದಿಂದಲೇ ಹೆಣ್ಣು ಮಕ್ಕಳು ಭಾರತದಲ್ಲಿ ಉನ್ನತ ಸ್ಥಾನಗಳಿಗೆ ಏರಲು ಸಾಧ್ಯವಾಗಿದೆ, ಸ್ತ್ರೀ ಸಮಾಜದ ಶ್ರೇಯೋಭಿವೃದ್ಧಿಗೆ ನಿಸ್ವಾರ್ಥದಿಂದ ಶ್ರಮಿಸಿದ ಮಹಾನ್ ತಾಯಿ ಸಾವಿತ್ರಿಬಾಯಿ, ಸಮಾಜ ನೀಡಿದ ಎಲ್ಲಾ ಅವಮಾನಗಳನ್ನು ಬದಿಗಿಟ್ಟು ಸಾಕ್ಷರತೆಯ ದೀಪ ಬೆಳಗಿದವರು ಸಾವಿತ್ರಿ ಬಾಯಿಪುಲೆ ಎಂದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮಾತನಾಡಿ, ಸಾವಿತ್ರಿ ಬಾಯಿಪುಲೆ ಅವರ ಬಾಲ್ಯ ಜೀವನ ಸ್ಮರಿಸುತ್ತ 1831 ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್ ನಲ್ಲಿ ಹುಟ್ಟಿದರು ಬಾಲ್ಯದಲ್ಲೇ ಜ್ಯೋತಿ ಬಾಪುಲೆ ಅವರನ್ನು ಮದುವೆಯಾಗಿ ವಿದ್ಯಾಭ್ಯಾಸ ಕಲಿತರು, 150 ವರ್ಷಗಳ ಹಿಂದೆ ಶಾಲೆ ತೊರೆದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ಸತ್ಯಶೋಧಕ ಸಮಾಜದಿಂದ ಮಾಡಿದರು, 1860ರಲ್ಲಿ ವಿಧವೆಯವರ ತಲೆ ಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು, ವಿಧವೆಯರಿಗೆ, ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗುವ ಮಹಿಳೆಯರಿಗೆ ಪುನರ್ ವಸತಿ ಕೇಂದ್ರಗಳನ್ನು ಹಾಗೂ ಶಿಶು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ನೆಲೆಕೊಟ್ಟರು, 19ನೇ ಶತಮಾನದಲ್ಲಿ ಮಹಿಳೆಯರಿಗೆ ಶಿಕ್ಷಣದ ಬಾಗಿಲು ತೆರೆಯದ ಸಂದರ್ಭದಲ್ಲಿ ಅಂದಿನ ಸಮಾಜದ ಕಟ್ಟುಪಾಡುಗಳ ಸುಧಾರಣೆಗಾಗಿ ಎಷ್ಟೇ ಅಪಮಾನಗಳಾದರು ತಡೆದುಕೊಂಡು ಸಮಾಜ ಸುಧಾರಣೆಗೆ ಪ್ರಯತ್ನಿಸಿದರು, ಅವರ ಈ ಸ್ಪೂರ್ತಿಯಿಂದ ಮಹಿಳೆಯರು ಇಂದು ಆಧುನಿಕ ಭಾರತದಲ್ಲಿ ಪ್ರಾಧಾನ್ಯತೆ ಪಡೆಯಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಅನುಪಮಾ ವಹಿಸಿದ್ದರು, ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ತೃತೀಯ ಲಿಂಗಿಗಳ ಮುಖಂಡರಾದ ದೀಪಿಕಾ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ, ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಹದೇವಮ್ಮ, ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!