ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆ ಗ್ರಾಹಕರಿಗೆ ಮುರುಳಿ ಮನವಿ

ಟೀ ಅಂಗಡಿ ಮಾಲೀಕನಿಂದ ಕೊರೊನಾ ಜಾಗೃತಿ

89

Get real time updates directly on you device, subscribe now.

ತುಮಕೂರು: ಕೊರೊನಾ ಮಾರಿ ಜನರನ್ನು ನಾನಾ ಸಂಕಷ್ಟಕ್ಕೆ ತಳ್ಳುತ್ತಿದೆ, 2ನೇ ಅಲೆ ಆರ್ಭಟಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ, ಇದರ ಮಧ್ಯೆ ಸರ್ಕಾರ ಕೊರೊನಾ ತಡೆಗೆ ಕರ್ಫ್ಯೂ ಸೇರಿದಂತೆ ಹಲವು ಮಾರ್ಗಸೂಚಿ ಬಿಡುಗಡೆ ಮಾಡಿದೆ, ಇದರ ಮಧ್ಯೆ ಅರಿವು ಮೂಡಿಸುವ ಕಾರ್ಯವೂ ನಡೆಯುತ್ತಿದೆ, ತುಮಕೂರು ನಗರದಲ್ಲೂ ಸ್ಥಳೀಯ ಆಡಳಿತ ಕೊರೊನಾ ತಡೆಗೆ ಜಾಗೃತಿ ಮೂಡಿಸುತ್ತಿದೆ.
ಇನ್ನು ತುಮಕೂರಿನ ಹೃದಯ ಭಾಗದಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಕುಮಾರ್ ಟೀ ಹೌಸ್ನಲ್ಲಿ ವಿಶೇಷ ರೀತಿಯಲ್ಲಿ ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ, ಅಂಗಡಿ ಮಾಲೀಕ ಮುರುಳಿ ಅವರು ಕೊರೊನಾ ತಡೆ ನಿಟ್ಟಿನಲ್ಲಿ ಗ್ರಾಹಕರಿಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ.
ಅಂಗಡಿಗೆ ಬರುವ ಗ್ರಾಹಕರಿಗೆ ಮೊದಲಿಗೆ ಸ್ಯಾನಿಟೈಸರ್ ನೀಡುತ್ತಾರೆ, ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಅಂಗಡಿಗೆ ಬರುವ ಗ್ರಾಹಕರಿಗೆ ಟೀ, ಕಾಫಿ, ಹಾಲು, ಜ್ಯೂಸ್ ಕೊಡಲ್ಲ, ಮಾಸ್ಕ್ ಧರಿಸಿ ಬಂದವರಿಗಷ್ಟೇ ಟೀ, ಕಾಫಿ ಲಭ್ಯ, ಕಾಫಿ, ಟೀ ಕುಡಿದ ತಕ್ಷಣ ಮತ್ತೆ ಮಾಸ್ಕ್ ಧರಿಸುವಂತೆ ಮನವಿ ಮಾಡುತ್ತಾರೆ.
ಕೊರೊನಾ ಮಾರಿ ಜೀವ ಬಲಿ ಪಡೆದು ಬಿಡುತ್ತೆ, ಆ ನಿಟ್ಟಿನಲ್ಲಿ ಗ್ರಾಹಕರಿಗೆ ಅರಿವು ಮೂಡಿಸುತ್ತಿದ್ದೇವೆ, ಅಂಗಡಿ ಒಳಗೆ ಬರಲು ಯಾರಿಗೂ ಅವಕಾಶ ನೀಡಿಲ್ಲ, ಅಂಗಡಿ ಮುಂದೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರು ಟೀ, ಕಾಫಿ ಕುಡಿಯಬೇಕು, ಯಾವುದೇ ಅಧಿಕಾರಿಗಳು ನಮಗೆ ಈ ರೀತಿ ಮಾಡಿ ಎಂದು ಹೇಳಿಲ್ಲ, ಬದಲಾಗಿ ನಾವೇ ಕೊರೊನಾ ತಡೆಗಾಗಿ ಈ ರೀತಿ ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ, ನಮ್ಮ ಅಂಗಡಿ ಮಾತ್ರವಲ್ಲದೆ ತುಮಕೂರಿನಲ್ಲಿರುವ ಪ್ರತಿ ಟೀ ಅಂಗಡಿ, ಹೋಟೆಲ್ಗಳಲ್ಲೂ ಈ ರೀತಿ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೆ ಕೊರೊನಾ ತಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಕುಮಾರ್ ಟೀ ಹೌಸ್ ಮಾಲೀಕ ಮುರುಳಿ.
ಒಟ್ಟಾರೆ ಕೊರೊನಾ ಜನರಿಗೆ ವಕ್ಕರಿಸಿ ಜೀವಕ್ಕೂ ಆಪತ್ತು ತರುತ್ತಿರುವ ಈ ಸಂದರ್ಭದಲ್ಲಿ ತಮ್ಮ ಅಂಗಡಿಗೆ ಬರುತ್ತಿರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಾ ಜಾಗೃತಿ ಮೂಡಿಸುತ್ತಿರುವ ಮುರುಳಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ, ಜನರು ಕೂಡ ಜಾಗ್ರತೆ ವಹಿಸಿದಲ್ಲಿ ಕೊರೊನಾ ದೂರ ಮಾಡಲು ಸಾಧ್ಯ ಎಂಬುದನ್ನು ಅರಿಯಬೇಕಿದೆ.

Get real time updates directly on you device, subscribe now.

Comments are closed.

error: Content is protected !!