ಮಧುಗಿರಿ: ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಡಿವೈಎಸ್ ಪಿಯಾಗಿದ್ದ ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಮಧುಗಿರಿ ನ್ಯಾಯಾಲಯ ಆದೇಶಿಸಿದೆ.
ಜಮೀನು ವ್ಯಾಜ್ಯ ಸಂಬಂಧ ಪಾವಗಡ ಮೂಲದ ಮಹಿಳೆಯೊಬ್ಬಳು ದೂರು ನೀಡಲು ಡಿವೈಎಸ್ ಪಿ ಕಚೇರಿಗೆ ಬಂದಿದ್ದಾಗ ಆಕೆಯನ್ನು ಪುಸಲಾಯಿಸಿ ಠಾಣೆಯ ಶೌಚಗೃಹದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಇದನ್ನು ಕೆಲವು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಈ ಸಂಬಂಧ ಸಂತ್ರಸ್ತೆ ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಡಿವೈಎಸ್ ಪಿ ರಾಮಚಂದ್ರಪ್ಪನನ್ನು ಬಂಧಿಸಿದ್ದ ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಹಿರಿಯ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮೀಳಮ್ಮ ಅವರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಸೋಮವಾರದವರೆಗೂ ಮಧುಗಿರಿ ಕಾರಾಗೃಹದಲ್ಲಿ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಇರಿಸಿ ಸೋಮವಾರ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಧುಗಿರಿ ಡಿವೈಎಸ್ ಪಿಗೆ ನ್ಯಾಯಾಂಗ ಬಂಧನ
Get real time updates directly on you device, subscribe now.
Prev Post
Next Post
Comments are closed.