ಚಿರತೆ ಬಾಲ ಹಿಡಿದು ಬಲೆಗೆ ಕೆಡವಿದ ಭೂಪ

5

Get real time updates directly on you device, subscribe now.


ತಿಪಟೂರು: ಚಿರತೆ ಎಂದರೆ ಯಾರಿಗೆ ಭಯವಿಲ್ಲ, ಶಬ್ದ ಕೇಳಿದರೆ ಭಯ ಮತ್ತು ಆತಂಕ ಎಂತಹ ಧೈರ್ಯಶಾಲಿ ಮುಖದಲ್ಲಿ ಮೂಡುತ್ತದೆ, ಆದರೆ ತಿಪಟೂರು ತಾಲ್ಲೂಕಿನ ರಂಗಾಪುರ ಬಳಿಯ ಪುರಲೆಹಳ್ಳಿ ರಸ್ತೆಯ ಕುಮಾರಸ್ವಾಮಿ ಎಂಬುವರ ತೋಟದಲ್ಲಿ ಐದು ವರ್ಷ ಪ್ರಾಯದ ಚಿರತೆ ಸುಮಾರು ದಿನಗಳಿಂದ ಬೀಡುಬಿಟ್ಟಿತ್ತು.

ಈ ವಿಚಾರವಾಗಿ ಅರಣ್ಯ ಇಲಾಖೆ ಬಲೆ ಬೀಸಿತ್ತು, ಇದೆಲ್ಲಾ ನಮಗೆ ಕಾಮನ್ ಎಂದು ತಿಳಿದ ಚಿರತೆ ಜನರ ಮಧ್ಯೆಯೇ ಓಡಾಡುತ್ತಾ ಬಲೆಗೆ ಬೀಳದೆ ಕಣ್ಣಾ ಮುಚ್ಚಾಲೆ ಆಟ ಆಡುವಾಗ ನೋಡಿದ ರಂಗಾಪುರದ ಆನಂದ್ ಎನ್ನುವ ಯುವಕ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಚಿರತೆಯನ್ನು ಅಟ್ಟಾಡಿಸಿ ಬಾಲ ಹಿಡಿದು ಬಲೆಗೆ ಕೆಡುವಿದ ಘಟನೆ ನಡೆದಿದೆ, ಇದನ್ನು ನೋಡುತ್ತಿದ್ದ ಜನ ಬೆರಗಾಗಿ ಬಾಯಿ ಮುಚ್ಚಿ ಕೊಂಡರೆ ಬೆಳಗ್ಗೆಯಿಂದ ಇಲ್ಲೇ ಕಾದು ಕುಳಿತ್ತಿದ್ದು ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಅಧಿಕಾರಿ ಭರತ್, ವಲಯ ಅರಣ್ಯ ಅಧಿಕಾರಿ ಕೆ.ಎಲ್.ಮಧು, ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಬಲೆ ಹಾಕಿ ಚಿರತೆ ಸೆರೆ ಹಿಡಿದರು, ಸೇರಿದ್ದ ಜನರು ಈ ಧೈರ್ಯಶಾಲಿ ಯುವಕನಿಗೆ ನಿಮ್ಮ ಅರಣ್ಯ ಇಲಾಖೆಯಲ್ಲಿ ಖಾಯಂ ಉದ್ಯೋಗ ನೀಡಬಾರದೇಕೆ ಎಂದು ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದರು.

Get real time updates directly on you device, subscribe now.

Comments are closed.

error: Content is protected !!