ಕೊರಟಗೆರೆ: ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವ ವೇಳೆತಾಲ್ಲೂಕಿನ ಕಂಬದಹಳ್ಳಿ ಸಮೀಪ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ವಾಸಿಯಾದ ರಂಗನಾಥ್ ಮಗನಾದ ಹರ್ಷೀತ್ (22) ಹಾಗೂ ಬಸಣ್ಣನವರ ಮಗನಾದ ಪ್ರವೀಣ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ, ಕಳೆದ ಎರಡು ದಿನಗಳ ಹಿಂದೆ ಹೊಳವನಹಳ್ಳಿ ಗ್ರಾಮದ ಮೂವರು ಯುವಕರು ಗೋವಾ ಪ್ರವಾಸಕ್ಕೆ ಹೋಗಿದ್ದಾರೆ, ಪ್ರವಾಸ ಮುಗಿಸಿಕೊಂಡು ಸೋಮವಾರ ರಾತ್ರಿ ಶಿರಾದ ಸಂಬಂಧಿಕರ ಮನೆಗೆ ಮತ್ತೊಬ್ಬ ಯುವಕ ಹರ್ಷ ಉಳಿದುಕೊಂಡಿದ್ದಾನೆ ಎನ್ನಲಾಗಿದೆ.
ಇಬ್ಬರು ಸ್ನೇಹಿತರನ್ನು ಇಲ್ಲೇ ಇದ್ದು ಬೆಳಗ್ಗೆ ಹೋಗಿ ಎಂದು ಹೇಳಿದ್ದಾನೆ, ಸ್ನೇಹಿತನ ಮಾತು ಕೇಳದೆ ಹೊಳವನಹಳ್ಳಿ ಗ್ರಾಮಕ್ಕೆ ಹೊರಟಿದ್ದಾರೆ, ಕೊರಟಗೆರೆ ಹತ್ತಿರ ಇರುವ ಕಂಬದಹಳ್ಳಿಗೆ ಬರುತ್ತಿದ್ದಾಗ ಲಾರಿಯೊಂದು ಅಡ್ಡ ಬಂದಿದ್ದು, ವೇಗವಾಗಿ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟರೆ ಹರ್ಷೀತ್ ಜೀವ ಇದ್ದ ಕಾರಣ ಸ್ಥಳೀಯರು ಆ್ಯಂಬುಲೆನ್ಸ್ ಕರೆಸಿ ತುಮಕೂರು ಜಿಲ್ಲಾಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಮದ್ ಖಾದರ್, ಸಿಪಿಐ ಅನಿಲ್, ಪಿಎಸ್ ಐ ಚೇತನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.